ಕರ್ನಾಟಕ

karnataka

ETV Bharat / state

ಜೈನ ಮುನಿಗಳಿಗೆ ರಕ್ಷಣೆ ಭರವಸೆ ಸರ್ಕಾರ ನೀಡುವರೆಗೂ ಸಲ್ಲೇಖನ ವೃತ ಕೈಗೊಳ್ಳುವೆ: ಕಣ್ಣೀರು ಹಾಕಿದ ಶ್ರೀ ಆಚಾರ್ಯ ಗುಣಧರನಂದಿ - ಹಿರೆಕೋಡಿಯ ನಂದಿ ಮುನಿಶ್ರೀಗಳ ಹತ್ಯೆ

ಹಿರೆಕೋಡಿಯ ನಂದಿ ಮುನಿಶ್ರೀಗಳ ಹತ್ಯೆಯನ್ನು ವರೂರು ಕ್ಷೇತ್ರದ ಅಚಾರ್ಯ ಗುಣಧರನಂದಿ ಮಹಾರಾಜರು ಖಂಡಿಸಿದ್ದಾರೆ.

Acharya Gunadharanandi Maharaja spoke at the press conference.
ವರೂರು ಕ್ಷೇತ್ರದ ಅಚಾರ್ಯ ಗುಣಧರನಂದಿ ಮಹಾರಾಜರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

By

Published : Jul 8, 2023, 4:28 PM IST

Updated : Jul 8, 2023, 5:00 PM IST

ವರೂರು ಕ್ಷೇತ್ರದ ಅಚಾರ್ಯ ಗುಣಧರನಂದಿ ಮಹಾರಾಜರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹುಬ್ಬಳ್ಳಿ:ಸಮಾಜದಲ್ಲಿ ಶಾಂತಿ ಮಂತ್ರದ ಮೂಲಕ ಅಹಿಂಸಾ ಸಿದ್ಧಾಂತ ಪ್ರತಿಪಾದಿಸುವ ಜೈನ ಮುನಿ ಅವರನ್ನು ಕೊಲೆ ಮಾಡಿರುವುದು ದುಃಖಕರ ಹಾಗೂ ಖಂಡನೀಯ. ಹಣದ ವಿಷಯಕ್ಕೆ ಕೊಲೆ ಮಾಡಿರುವುದು ವಿಷಾದಕರ ಸಂಗತಿಯಾಗಿದೆ. ಜೈನ ಮುನಿಗಳಿಗೆ ರಕ್ಷಣೆಯೇ ಇಲ್ಲವಾಗಿದ್ದು, ನ್ಯಾಯ ಸಿಗುವವರೆಗೂ ಊಟ, ಉಪಹಾರ ಬಿಟ್ಟು ಆಮರಣ ಉಪವಾಸ ಮಾಡುವುದಾಗಿ ವರೂರು ಕ್ಷೇತ್ರದ ಅಚಾರ್ಯ ಗುಣಧರನಂದಿ ಮಹಾರಾಜರು ಹೇಳಿದ್ದಾರೆ.

ಹುಬ್ಬಳ್ಳಿಯ ವರೂರು ಕ್ಷೇತ್ರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿರೆಕೋಡಿಯ ಶ್ರೀ 108 ಕಾಮಕುಮಾರ ನಂದಿ ಮುನಿ ಮಹಾರಾಜ ಸ್ವಾಮೀಜಿಗಳನ್ನು ಹತ್ಯೆ ಮಾಡಿರುವ ಪ್ರಕರಣ ನಿಜಕ್ಕೂ ಜೈನ ಸಮಾಜಕ್ಕೆ ಹಾಗೂ ಜೈನ ಮುನಿಗಳಿಗೆ ಆತಂಕವನ್ನುಂಟು ಮಾಡಿದೆ. ಮುನಿ ಶ್ರೀಗಳು ತ್ಯಾಗ ಜೀವಿಗಳು, ಪಿಂಚಿ, ಕಮಂಡಲು, ಪುಸ್ತಕದ ಜ್ಞಾನ ಮಾತ್ರ ಅವರ ಆಸ್ತಿ. ಅವರು ಸಮಾಜದ ಮೇಲೆ ಪ್ರಕೃತಿ ವಿಕೋಪ, ಯಾವುದೇ ಅಹಿತಕರ ಘಟನೆ ಜರುಗದಂತೆ ಒಳಿತಾಗಿ ನಿರಂತರ ತಪಸ್ಸು ಮಾಡುವವರು. ಆದರೆ, ಶಾಂತಿಪ್ರಿಯ ಸಮಾಜದ ಸ್ವಾಮೀಜಿ ಬರ್ಬರ ಹತ್ಯೆ ತೀವ್ರ ನೋವು ತಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಕೊಲೆ ಪ್ರಕರಣವನ್ನು ಪೊಲೀಸರು ಸೂಕ್ತವಾಗಿ ತನಿಖೆ ನಡೆಸಬೇಕು‌. ಕನ್ನಡ ಸಾಹಿತ್ಯ, ಶಿಲ್ಪಕಲೆ, ಸಂಸ್ಕೃತಿ ಬೆಳವಣಿಗೆಯಲ್ಲಿ ಜೈನ ಸಮಾಜ ಅಪಾರ ಕೊಡುಗೆ ನೀಡಿದೆ. ಆದರೆ, ಸರ್ಕಾರಕ್ಕೆ ನಮ್ಮಂತ ಸಣ್ಣ ಅಲ್ಪಸಂಖ್ಯಾತ ಸಮುದಾಯ ಬೇಡವಾಗಿದೆ ಎಂದು ಶ್ರೀಗಳು ಆಕ್ರೋಶ ವ್ಯಕ್ತಪಡಿಸಿದರು.

ಜೈನ ಮುನಿಗಳಿಗೆ ಸೂಕ್ತ ರಕ್ಷಣೆ ಕೊಡಬೇಕು, ಕೊಲೆಗಡುಕರಿಗೆ ಶಿಕ್ಷೆ ಆಗಬೇಕು ಎಂದು ಗಳಗಳನೆ ಕಣ್ಣೀರು ಸುರಿಸಿದ ಜೈನಮುನಿ ಗುಣಧರನಂದಿ ಮಹಾರಾಜರು ಆಕ್ರೋಶ ವ್ಯಕ್ತಪಡಿಸಿದರು. ಜೈನ ಸಮಾಜ, ಜೈನ ಮುನಿಗಳಿಗೆ, ಬಸದಿಗೆ ರಕ್ಷಣೆ ನೀಡುವುದಕ್ಕೆ ಸರ್ಕಾರ ಲಿಖಿತ ಭರವಸೆ ಕೊಡುವವರೆಗೆ ಅನ್ನ, ಆಹಾರ ತ್ಯಾಗ ಮಾಡುತ್ತೇನೆ. ಪ್ರಾಣ ಹೋಗುವವರೆಗೆ ಸಲ್ಲೇಖ‌ನ ವ್ರತ ಮಾಡುತ್ತೇನೆ ಎಂದು ತೀವ್ರ ನೊಂದು ಪ್ರತಿಪಾದಿಸಿದರು.

ಹಿರೇಕೋಡಿ ಆಶ್ರಮದ ಜೈನ ಮುನಿ ಕೊಲೆ:ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹಿರೇಕೋಡಿ ಆಶ್ರಮದ ಜೈನ ಮುನಿ ಕೊಲೆಗೀಡಾಗಿದ್ದಾರೆ. ಶ್ರೀ ಕುಮಾರ್​ ನಂದಿ ಮಹಾರಾಜರು ಕಳೆದ 15 ವರ್ಷಗಳಿಂದ ನಂದಿ ಪರ್ವತದಲ್ಲಿ ವಾಸವಾಗಿದ್ದರು. ಕಳೆದ ಬುಧವಾರ ಜೈನಮುನಿಗಳು ತಾವು ವಾಸವಿದ್ದ ಕೋಣೆಯಲ್ಲಿ ಪಿಂಚಿ, ಕಮಂಡಲ ಹಾಗೂ ಮೊಬೈಲ್​​ ಬಿಟ್ಟು ಕಾಣೆಯಾಗಿದ್ದರು.

ಹಿರೇಕೋಡಿ ಗ್ರಾಮದಲ್ಲಿ ನೀರವಮೌನ : ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಪ್ರಕರಣಕ್ಕೆ ಹಿರೇಕೋಡಿಯಲ್ಲಿ ನೀರವಮೌನ ಆವರಿಸುವಂತೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಹಿರೇಕೋಡಿ ಗ್ರಾಮದಲ್ಲಿ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಸ್ವಾಮೀಜಿ ನೆನೆದು ಗ್ರಾಮಸ್ಥರು ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂಓದಿ:Jain monk murder: ನಾಪತ್ತೆಯಾಗಿದ್ದ ಚಿಕ್ಕೋಡಿಯ ಜೈನಮುನಿ ಹತ್ಯೆ.. ವೈಯಕ್ತಿಕ ಕಾರಣಕ್ಕೆ ಕೊಲೆ - ಎಸ್ಪಿ ಮಾಹಿತಿ

Last Updated : Jul 8, 2023, 5:00 PM IST

ABOUT THE AUTHOR

...view details