ಹುಬ್ಬಳ್ಳಿ :ಕೋವಿಡ್ ಸಮಯದಲ್ಲಿ ಸೋಂಕಿತರಿಗೆ ಬೆಡ್ ಕೊರತೆಯಾಗಬಾರದೆಂದು ಸರ್ಕಾರ ರೈಲ್ವೆ ಕೋಚ್ಗಳನ್ನು ಐಸೋಲೇಶನ್ ವಾರ್ಡ್ಗಳಾಗಿ ಪರಿವರ್ತಿಸಿತ್ತು. ಆದರೆ, ಈ ವಿಶೇಷ ಕೋಚ್ಗಳು ಇದೀಗ ಬಳಕೆಯಾಗದೆ ತುಕ್ಕು ಹಿಡಿಯುತ್ತಿವೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆ ಕೋವಿಡ್ ಸೋಂಕಿತರು ಸರಿಯಾಗಿ ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಈ ಸಮಯದಲ್ಲಿ ರೆಡಿಯಾಗಿರುವ ರೈಲ್ವೆ ಕೋಚ್ಗಳನ್ನು ಬಳಸಿಕೊಂಡರೆ ಬೆಡ್ ಕೊರತೆ ನೀಗಿಸಬಹುದು. ಆದರೆ, ಸರ್ಕಾರ ಇರುವ ವ್ಯವಸ್ಥೆಯನ್ನು ಸದುಪಯೋಗಪಡಿಸಿಕೊಳ್ಳಲು ಹಿಂದೇಟು ಹಾಕುತ್ತಿದೆ.
ಸುಮಾರು 280 ಐಸೋಲೇಶನ್ ಕೋಚ್ಗಳು ನೈರುತ್ಯ ರೈಲ್ವೆ ವಿಭಾಗದಲ್ಲಿ ರೆಡಿ ಇದೆ. ಈ ಪೈಕಿ ಹುಬ್ಬಳ್ಳಿಯ ವರ್ಕ್ ಶಾಪ್ನಲ್ಲಿ 96 ಕೋಚ್ಗಳನ್ನು ಐಸೋಲೇಶನ್ ಕೋಚ್ಗಳಾಗಿ ಪರಿವರ್ತಿಸಲಾಗಿದೆ.