ಹುಬ್ಬಳ್ಳಿ: ಪೊಲೀಸರ ಮೂಲಕ ರೈತರ ಪ್ರತಿಭಟನೆ ಹತ್ತಿಕ್ಕಲು ಫೋನ್ ಟ್ರ್ಯಾಪ್ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಎನ್. ಹೆಚ್. ಕೋನರೆಡ್ಡಿ ಆರೋಪಿಸಿದ್ದಾರೆ.
ಸರ್ಕಾರ ರೈತ ಹೋರಾಟಗಾರರ ಫೋನ್ ಟ್ರ್ಯಾಪ್ ಮಾಡ್ತಿದೆ: ಕೋನರೆಡ್ಡಿ ಆರೋಪ - N. H. kona Reddy
ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಹುನ್ನಾರ ನಡೆಸಿದ್ದು, ಫೋನ್ ಟ್ರ್ಯಾಪ್ ಮಾಡುತ್ತಿದೆ ಎಂದು ಎಂದು ಮಾಜಿ ಶಾಸಕ ಎನ್. ಹೆಚ್. ಕೋನರೆಡ್ಡಿ ಆರೋಪಿಸಿದ್ದಾರೆ.
ಸರ್ಕಾರ ರೈತ ಹೋರಾಟಗಾರರ ಫೋನ್ ಟ್ರ್ಯಾಪ್ ಮಾಡುತ್ತಿದೆ: ಕೋನರೆಡ್ಡಿ ಆರೋಪ
ನಗರದ ಚೆನ್ನಮ್ಮ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರ್ಕಾರ ರೈತರಿಗೆ ಹಾಗೂ ಕಾರ್ಮಿಕರಿಗೆ ಮಾರಕವಾದ ಕಾಯ್ದೆ ಜಾರಿಗೆ ತರುತ್ತಿದೆ. ಆದ್ರೆ ಹೋರಾಟಗಳನ್ನು ಹತ್ತಿಕ್ಕಲು ಸರ್ಕಾರ ಹುನ್ನಾರ ನಡೆಸಿ, ಫೋನ್ ಟ್ರ್ಯಾಪ್ ಮಾಡುತ್ತಿದೆ ಎಂದು ದೂರಿದರು.
ಜನರು ಸ್ವಯಂಪ್ರೇರಿತವಾಗಿ ಬಂದ್ ಬೆಂಬಲಿಸುತ್ತಿದ್ದಾರೆ. ಇದನ್ನು ಸಹಿಸದ ಸರ್ಕಾರದ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಸರ್ಕಾರ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಕೋನರೆಡ್ಡಿ ಎಚ್ಚರಿಕೆ ರವಾನಿಸಿದರು.