ಧಾರವಾಡ:ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆಯು ನೋಡುಗರ ಗಮನ ಸೆಳೆಯಿತು.
ನೌಕರ ಕಲಾವಿದರು ತಮ್ಮ ಕೈಯಿಂದ ಕರಕುಶಲ ವಸ್ತುಗಳನ್ನು ತಯಾರಿಸುವಲ್ಲಿ ಕಾರ್ಯನಿರತರಾಗಿದ್ದರು. ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಪೇಪರ್ ಕಟಿಂಗ್, ಸಂಗೀತ, ನೃತ್ಯ, ಕೃಷಿ, ಕುಂಬಾರಿಕೆ, ಚಮ್ಮಾರಿಕೆ, ಕಸೂತಿ ಕಲೆ, ಬಾಗಿಲು ಪಡದೆ, ಕೈ ಹೆಣಕೆಗಳು, ಫೋಟೋ, ಬಾಸ್ಕೆಟ್, ಮದುವೆ ಪತ್ರದಿಂದ ಮುಖವಾಡ, ಟೋಪಿ, ಮಕ್ಕಳು ಆಡುವ ಆಟಿಕೆಗಳನ್ನು ಮತ್ತು ಶೈಕ್ಷಣಿಕ ವಿಷಯಗಳನ್ನೊಳಗೊಂಡ ಕ್ರಾಫ್ಟ್ಗಳು ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ತಯಾರಿಸಲಾಗಿತ್ತು.