ಕರ್ನಾಟಕ

karnataka

ETV Bharat / state

ಸಾರಿಗೆ ಸಂಸ್ಥೆ ಬಸ್​ಗಳ ಚಾಲಕರೇ ಹಿಂಗಾದ್ರೆ ಹೆಂಗ್‌ರೀ.. ಕಾನೂನು ಎಲ್ರಿಗೂ ಒಂದೇ ಅಲ್ವಾ? - ಸರ್ಕಾರಿ ಬಸ್​ ವಾಹನ ಚಾಲಕರ ವಾಹನ ಚಾಲನಾ ರೀತಿ

ವಾಹನ ಚಾಲನೆ ಮಾಡುವವರು ಮೊಬೈಲ್​ ಬಳಕೆ ಮಾಡಬಾರದು ಎಂಬ ನಿಯಮವಿದೆ. ಆದರೆ, ಇಲ್ಲೊಬ್ಬ ಸಾರಿಗೆ ಸಂಸ್ಥೆ ಬಸ್​ ಡ್ರೈವರ್ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿರೋದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ.

hub
ಸರ್ಕಾರಿ ಬಸ್​ ಚಾಲಕನ ಮೊಬೈಲ್​ ಬಳಕೆಯುಕ್ತ ವಾಹನ ಚಾಲನೆ.

By

Published : Nov 26, 2019, 12:39 PM IST

ಹುಬ್ಬಳ್ಳಿ:ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ ಮಾಡಬಾರದು ಎಂದು ಸಂಚಾರ ನಿಯಮಗಳೇ ಹೇಳುತ್ತವೆ. ಆದರೆ, ಶಿರಸಿ ಸಾರಿಗೆ ಡಿಪೋಗೆ ಸೇರಿದ ಏ-31 ಈ-1252 ಬಸ್​ನ ಬಸ್ ಚಾಲಕ ಮೊಬೈಲ್ ಬಳಕೆ ಮಾಡುತ್ತಲೇ ಅತೀ ವೇಗವಾಗಿ ಬಸ್​ ಚಲಾಯಿಸುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾನೆ.

ಸಾರಿಗೆ ಸಂಸ್ಥೆ ಬಸ್​ ಚಾಲಕ ಮೊಬೈಲ್​ನಲ್ಲಿ ಮಾತಾಡ್ತಾ ವಾಹನ್ ಚಾಲನೆ..

ಇಲ್ಲಿ ಚಾಲಕ ಸ್ವಲ್ಪ ಯಾಮಾರಿದ್ರು ಕೂಡಾ 53 ಜನ ಪ್ರಯಾಣಿಕರು ಸೀದಾ ಸ್ವರ್ಗಕ್ಕೆ ಹೋಗೋದು ಗ್ಯಾರಂಟಿ. ಸಾರಿಗೆ ಸಂಸ್ಥೆ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಕರ್ತವ್ಯದ ಸಮಯದಲ್ಲಿ ಮೊಬೈಲ್ ಉಪಯೋಗಿಸಬಾರದು ಎಂಬ ನಿಯಮವಿದೆ. ಆದ್ರೂ ಕೂಡಾ ಈ ಬಸ್​ನ ಚಾಲಕ ಮಾತ್ರ ಯಾವುದೇ ನಿಯಮಗಳಿಗೆ ತಲೆ ಕೆಡಿಸಿಕೊಳ್ಳದೆ ಚಲಿಸುವ ಬಸ್​ನಲ್ಲಿ ಮೊಬೈಲ್ ಬಳಕೆ ಮಾತ್ತಿರುವುದನ್ನು ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ.

ABOUT THE AUTHOR

...view details