ಹುಬ್ಬಳ್ಳಿ:ಕೇಂದ್ರ ಸರ್ಕಾರ 1200ರೂ. ಕೋಟಿ ಬಿಡುಗಡೆ ಮಾಡಿದೆಯೆಂಬ ಮಾಹಿತಿ ಕೇಳಿದ್ದೇನೆ. ಆದರೆ, ಕನಿಷ್ಠ ಪಕ್ಷ ತ್ವರಿತವಾಗಿ ರಾಜ್ಯಕ್ಕೆ 5 ಸಾವಿರ.ರೂ ಕೋಟಿ ಕೊಡಬೇಕಿತ್ತು ಎಂದು ಮಾಜಿ ಸಚಿವ ಆರ್.ವಿ ದೇಶಪಾಂಡೆ ಅಸಮಾಧಾನ ಹೊರ ಹಾಕಿದ್ದಾರೆ.
ಸರ್ಕಾರದ ಕಾರ್ಯವೈಖರಿ ಮಂದಗತಿಯಲ್ಲಿದೆ: ಆರ್.ವಿ ದೇಶಪಾಂಡೆ - ಇತ್ತೀಚಿನ ಆರ್.ವಿ ದೇಶಪಾಂಡೆ ಸುದ್ದಿ
ಕೇಂದ್ರ ಸರ್ಕಾರ 1200 ರೂ ಕೋಟಿ ಬಿಡುಗಡೆ ಮಾಡಿದೆ ಎಂಬ ಮಾಹಿತಿ ಕೇಳಿದ್ದೇನೆ. ಆದರೆ, ಕನಿಷ್ಠ ಪಕ್ಷ ತ್ವರಿತವಾಗಿ ರಾಜ್ಯಕ್ಕೆ 5 ಸಾವಿರ.ರೂ ಕೋಟಿ ಕೊಡಬೇಕಿತ್ತು. ಸರ್ಕಾರ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಮಾಜಿ ಸಚಿವ ಆರ್.ವಿ ದೇಶಪಾಂಡೆ ಆಕ್ರೋಶ ಹೊರ ಹಾಕಿದ್ದಾರೆ.
ಸರ್ಕಾರದ ಕಾರ್ಯವೈಖರಿ ಮಂದಗತಿಯಲ್ಲಿದೆ : ಆರ್.ವಿ ದೇಶಪಾಂಡೆ
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಆರ್.ವಿ ದೇಶಪಾಂಡೆ, ಈ ಹಿಂದೆ ನಮ್ಮ ಸರ್ಕಾರ ಇದ್ದಾಗ ಇಷ್ಟೊಂದು ಪ್ರಮಾಣದಲ್ಲಿ ನೆರೆ ಬರದಿದ್ದರೂ 16 ಸಾವಿರ ಕೋಟಿ ಬಿಡುಗಡೆ ಮಾಡಿತ್ತು. ಇಂದು ರಾಜ್ಯದ ಬಹತೇಕ ಜಿಲ್ಲೆಗಳು ಅತಿವೃಷ್ಟಿಗೀಡಾಗಿವೆ. ಪ್ರವಾಹ ಬಂದು ಎರಡೂವರೆ ತಿಂಗಳಾದರೂ ಸರ್ಕಾರ ನೀಡಿದ ಹಣ ಸಂತ್ರಸ್ತರಿಗೆ ತಲುಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನ ಇಷ್ಟೊಂದು ಕಷ್ಟದಲ್ಲಿದ್ದಾಗ,ರಾಜ್ಯ ಸರ್ಕಾರ ಇನ್ನೂ ಕ್ರಿಯಾಶೀಲವಾಗಬೇಕಿತ್ತು. ಆದ್ರೆ, ಸರ್ಕಾರ ಮಂದಗತಿಯಲ್ಲಿ ನಡೆಯುತ್ತಿದೆ ಎಂದರು.