ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷದ ಮುಖಂಡರೊಬ್ಬರ ಸಂಬಂಧಿ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಬಿಜೆಪಿಯ ರೈತ ಮೋರ್ಚಾದ ಈಶ್ವರಗೌಡ ಪಾಟೀಲ ಅವರ ಸೋದರ ಸಂಬಂಧಿ ಎನ್ನಲಾದ ಅಭಿಷೇಕ ಪಾಟೀಲ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಭಿಷೇಕ್ಗೆ ಹಳೆ ವೈಷಮ್ಯದ ಹಿನ್ನೆಲೆ ದುಷ್ಕರ್ಮಿಗಳು ಚಾಕು ಇರಿಯಲಾಗಿದೆ ಎನ್ನಲಾಗ್ತಿದೆ. ಸಿದ್ಧರಾಮನಗರದ ಪ್ರದೀಪ ಎಂಬುವರ ತಂಡದಿಂದ ಈ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾಗ್ತಿದೆ. ಈ ಹಿಂದೆಯೂ ಈ ತಂಡದವರು ಪಾಟೀಲರ ಮನೆಗೆ ಬಂದು ಕಾರಿನ ಗಾಜನ್ನು ಒಡೆದು ಹೋಗಿದ್ದರಂತೆ. ಆದ್ರೆ ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಚಿಕತ್ಸೆ ಫಲಿಕಾರಿಯಾಗದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.