ಹುಬ್ಬಳ್ಳಿ:ಪ್ರವಾಸ ಅಂದ್ರೆ ಸಾಕು ಎಲ್ಲರಿಗೂ ಎಲ್ಲಿಲ್ಲದ ಸಂತಸ. ಪ್ರವಾಸಿಗರ ಅನುಕೂಲಕ್ಕಾಗಿಯೇ ರೈಲ್ವೆ ಇಲಾಖೆ ಈಗ ಐಷಾರಾಮಿ ಪೀಠೋಪಕರಣದೊಂದಿಗೆ ಗೋಲ್ಡನ್ ಚಾರಿಯಟ್ ರೈಲನ್ನು ಪುನಃ ಓಡಿಸಲು ನಿರ್ಧರಿಸಿದೆ.
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ರೈಲ್ವೆ ಇಲಾಖೆಯ ದಕ್ಷಿಣ ಭಾರತದ ಏಕೈಕ ಐಷಾರಾಮಿ ರೈಲು ಎಂದೇ ಕರೆಸಿಕೊಳ್ಳುವ ಗೋಲ್ಡನ್ ಚಾರಿಯಟ್ ಶೀಘ್ರದಲ್ಲೇ ಮತ್ತೆ ತನ್ನ ಸಂಚಾರವನ್ನು ಆರಂಭಿಸಲಿದೆ. ಪ್ರವಾಸಿಗರ ಕೊರತೆಯಿಂದ ಇಷ್ಟು ದಿನಗಳ ಕಾಲ ಸ್ಥಗಿತಗೊಂಡಿದ್ದ ಗೋಲ್ಡನ್ ಚಾರಿಯಟ್ ಈಗ ನವನವೀನ ವಿನ್ಯಾಸದೊಂದಿಗೆ ಮತ್ತೆ ಟ್ರ್ಯಾಕ್ಗೆ ಇಳಿಯಲಿದೆ. ಹೊಸ ಇಂಟೀರಿಯಲ್ ಡೆಕೊರೇಷನ್ ನಿಮಗೂ ಆಶ್ಚರ್ಯ ತಂದಿಡಬಹುದು.
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು 2021ರ ಜನವರಿಯಲ್ಲಿ ತನ್ನ ಸಂಚಾರ ಆರಂಭಿಸಲಿರುವ ಈ ಐಷಾರಾಮಿ ರೈಲಿನಲ್ಲಿ 5 ಸ್ಟಾರ್ ಹೋಟೆಲ್ ಮಾದರಿಯ ವರ್ಣರಂಜಿತ ರೂಮ್ಗಳಿವೆ. ಕಡಿಮೆ ಖರ್ಚಿನಲ್ಲಿ ಸುಖ ಪ್ರಯಾಣ ನೀಡುವ ಹೊಸ ಯೋಜನೆ ಹಾಕಿಕೊಂಡಿರುವ ಐಆರ್‌ಸಿಟಿಸಿಯು ಪ್ರವಾಸಿಗರನ್ನು ಸೆಳೆಯಲು (Indian Railway Catering and Tourism Corporation) ಮತ್ತೆ ಈ ರೀತಿ ಸಿದ್ಧಪಡಿಸುತ್ತಿದೆ.
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಐಷಾರಾಮಿ ಪೀಠೋಪಕರಣದ ಜೊತೆಗೆ ರೂಮ್, ಶೌಚಗೃಹ, ಅಂತಾರಾಷ್ಟ್ರೀಯ ಬ್ರಾಂಡ್ಗಳ ಹಾಸಿಗೆಗಳು, ಮನೋರಂಜನೆಗಾಗಿ ಎಲ್ಇಡಿ ಟಿವಿ ಜೊತೆಗೆ ನೆಟ್ಫಿಕ್ಸ್, ಅಮೆಜಾನ್, ಹಾಟ್ಸ್ಟಾರ್ ಸಂಪರ್ಕ ಸೇರಿದಂತೆ ಪ್ರವಾಸಿಗರ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾ ಮತ್ತು ಅಗ್ನಿಶಾಮಕ ವ್ಯವಸ್ಥೆಯನ್ನು ಕಲ್ಪಿಸಿದೆ.
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಅತಿಥಿಗಳು ಪ್ರಯಾಣದಲ್ಲಿ ಆರಾಮದಾಯಕವಾಗಿರಲು ರೈಲಿನಲ್ಲಿ ಸ್ನಾನದ ಸೌಕರ್ಯ ಜತೆಗೆ ವ್ಯಾಯಾಮಕ್ಕಾಗಿ ವಿಶೇಷ ಜಿಮ್ ಯಂತ್ರಗಳನ್ನು ಅಳವಡಿಸಲಾಗಿದೆ. ಐಆರ್‌ಸಿಟಿಸಿಯು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ವಿವಿಧ ಪ್ರವಾಸಿ ಸ್ಥಳಗಳನ್ನು ಒಳಗೊಂಡ ಮೂರು ರಾಜ್ಯಗಳ ಪ್ರವಾಸ ಆಯೋಜಿಸಿದೆ. ಈ ಪ್ರವಾಸಗಳು ಜನವರಿ 2021ರಿಂದ ಆರಂಭಗೊಳ್ಳಲಿದೆ ಎನ್ನುತ್ತಾರೆ ಐಆರ್‌ಸಿಟಿಸಿ ಮ್ಯಾನೇಜರ್ ನವೀನ ವರ್ಮೈ.
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಸಂಬಂಧ ಹೊಸ ವಿನ್ಯಾಸದೊಂದಿಗೆ ರೈಲು ಸಂಚಾರಕ್ಕೆ ಸಿದ್ಧತೆ ನಡೆದಿದೆ. ಐಆರ್‌ಸಿಟಿಸಿ ವೆಬ್ ತಾಣದಲ್ಲಿ ಟಿಕೆಟ್ ಕಾದಿರಿಸುವ ಭಾರತೀಯ ಪ್ರವಾಸಿಗರಿಗೆ ಭರ್ಜರಿ ಶೇ. 35ರಷ್ಟು ರಿಯಾಯಿತಿ ಕೊಡಲಾಗುತ್ತಿದೆ ಎನ್ನುತ್ತಾರೆ ಐಆರ್‌ಸಿಟಿಸಿ ಏರಿಯಾ ಆಫೀಸರ್ ಮಂಜುನಾಥ.
ಗೋಲ್ಡನ್ ಚಾರಿಯಟ್ ಐಷಾರಾಮಿ ರೈಲು ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿಯೇ ಇರುವುದು ನಿಮಗೆ ಬೇಸರವಾಗಿದ್ರೆ, ಐಆರ್‌ಸಿಟಿಸಿ ನಿಮಗಾಗಿ ಆಕರ್ಷಕ ಕೊಡುಗೆಗಳನ್ನು ತಂದಿದೆ. ಮುಂದಿನ ವರ್ಷ ಭರ್ಜರಿ ಪ್ರವಾಸಕ್ಕೆ ಈಗಲೇ ಯೋಜನೆ ಹಾಕಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅದರ ಅಧಿಕೃತ ಜಾಲತಾಣ ನೋಡಬಹುದು.