ಕರ್ನಾಟಕ

karnataka

By

Published : May 28, 2020, 2:59 PM IST

ETV Bharat / state

ಒಂದು ತಿಂಗಳ ಇಎಂಐ ತಡವಾಗಿದ್ದಕ್ಕೆ 7 ಬಾರಿ ದಂಡ: ಹುಬ್ಬಳ್ಳಿಯಲ್ಲಿ ಗ್ರಾಹಕ ಕಂಗಾಲು!

ಲಾಕ್​ಡೌನ್​ ಹಿನ್ನೆಲೆ ಕೇಂದ್ರ ಸರ್ಕಾರ ಮೂರು ತಿಂಗಳ ಇಎಂಐ ಕಟ್ಟದಂತೆ ಬ್ಯಾಂಕ್​ ಗ್ರಾಹಕರಿಗೆ ವಿನಾಯ್ತಿ ನೀಡಿತ್ತು. ಆದರೆ ಈ ಆದೇಶದ ವಿರುದ್ಧ ಬ್ಯಾಂಕ್​ಗಳು ಕೆಲಸ ಮಾಡುತ್ತೀವೆ ಎಂಬ ಆರೋಪ ಕೇಳಿ ಬಂದಿದೆ.

dsd
ಒಂದು ತಿಂಗಳ ಇಐಎಂ ತಡವಾಗಿದ್ದಕ್ಕೆ 7 ಬಾರಿ ದಂಡ

ಹುಬ್ಬಳ್ಳಿ:ಸರ್ಕಾರಿ ಅದೇಶವನ್ನು ಗಾಳಿಗೆ ತೂರಿ ಕರ್ನಾಟಕ ಬ್ಯಾಂಕ್ ಗ್ರಾಹಕರಿಂದ ಸುಲಿಗೆಗೆ ಮುಂದಾಗಿದೆ ಎಂಬ ಆರೋಪ ನಗರದಲ್ಲಿ ಕೇಳಿ ಬಂದಿದೆ.

ಒಂದು ತಿಂಗಳ ಇಎಂಐ ತಡವಾಗಿದ್ದಕ್ಕೆ 7 ಬಾರಿ ದಂಡ

ಬ್ಯಾಂಕ್ ಇಎಂಐ ಕಟ್ಟಲು ವಿಳಂಬ ಮಾಡಿದಕ್ಕೆ ಒಂದೇ ತಿಂಗಳಲ್ಲಿ ಏಳು ಬಾರಿ ದಂಡ ವಿಧಿಸಿ ಕರ್ನಾಟಕ ಬ್ಯಾಂಕ್​ ಗ್ರಾಹಕನ ಸುಲಿಗೆ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಸಂಗಮೇಶ್ ಹಡಪದ ಎಂಬುವವರು ತಮ್ಮ ಸಲೂನ್ ಶಾಪ್​ ಬಂದ್ ಆಗಿದ್ದರಿಂದ‌ ಇಎಂಐ ಕಟ್ಟಿರಲಿಲ್ಲ. ಒಂದು ತಿಂಗಳ ಇಎಂಐ ವಿಳಂಬ ಮಾಡಿದ್ದಕ್ಕೆ 590 ರೂಪಾಯಿಯಂತೆ ಬ್ಯಾಂಕ್​ ಒಟ್ಟು ಏಳು ಬಾರಿ 4150 ರೂಪಾಯಿ ದಂಡ ವಸೂಲಿ‌ ಮಾಡಿದೆಯಂತೆ.

ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರಂತೆ. ಬಜಾಜ್ ಫೈನಾನ್ಸ್​ನಲ್ಲಿ 30 ಸಾವಿರ ಸಾಲ‌ ಮಾಡಿದ್ದ ಸಂಗಮೇಶ್ ಪ್ರತಿ ತಿಂಗಳು ಮೂರು ಸಾವಿರ ಇಎಂಐ ಕಟ್ಟುತ್ತಿದ್ದರು. ಕೇಂದ್ರ ಸರ್ಕಾರ ಆದೇಶವಿದ್ದರೂ ಸಹ ಬ್ಯಾಂಕುಗಳು ಮಾತ್ರ ಕಾಯಕ ನಿಲ್ಲಸಿಲ್ಲ. ಹೀಗಾಗಿ ಜೀವನ ನಡೆಸುವುದೇ ಕಷ್ಟವಾಗಿದೆ. ಕರ್ನಾಟಕ ಬ್ಯಾಂಕ್​ ಮ್ಯಾನೇಜರ್​ಗೆ​ ಕೇಳಿದ್ರೆ, ಸಮಸ್ಯೆ ಉದ್ಭವವಾಗಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಿದ್ದಾರೆ ಎಂದು ಗ್ರಾಹಕ ಸಂಗಮೇಶ್ ಹಡಪದ ಹೇಳಿದ್ದಾರೆ.

ABOUT THE AUTHOR

...view details