ಕರ್ನಾಟಕ

karnataka

ETV Bharat / state

ಸಂತ್ರಸ್ತರ ನೋವಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ನಾಳೆಯಿಂದ ಪ್ರತಿಭಟನೆ: ಸಿದ್ದರಾಮಯ್ಯ ಘೋಷಣೆ - siddaramaiah visits hubli news

ಸರ್ಕಾರ ನೆರೆ ಸಂತ್ರಸ್ತರಿಗೆ ನೋವಿಗೆ ಸ್ಪಂದಿಸದ ಹಿನ್ನೆಲೆ ನಾಳೆಯಿಂದ ಪ್ರತಿಭಟನೆ ನಡೆಸುವುದಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ತಿಳಿಸಿದ್ದಾರೆ.

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

By

Published : Oct 22, 2019, 3:56 PM IST

Updated : Oct 22, 2019, 4:04 PM IST

ಹುಬ್ಬಳ್ಳಿ:ಚುನಾವಣಾ ಸಮೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲಾಗಿದೆ. ಆದರೆ, ಮಹಾರಾಷ್ಟ್ರದಲ್ಲಿ ಐದು ವರ್ಷಗಳ ಕಾಲ ಬಿಜೆಪಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹೀಗಾಗಿ ಬಿಜೆಪಿಗೆ ಜನ ಹೇಗೆ ಮತಹಾಕುತ್ತಾರೆ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ‌ಪ್ರಶ್ನಿಸಿದರು.

ನಗರದ ವಿಮಾನ‌ ನಿಲ್ದಾಣದಲ್ಲಿ ‌ಮಾತನಾಡಿದ ಅವರು, ನಾನು ಚುನಾವಣಾ ಪ್ರಚಾರಕ್ಕೆ ಮಹಾರಾಷ್ಟ್ರಕ್ಕೆ ಹೋದ ಸಂದರ್ಭದಲ್ಲಿ ನೋಡಿದ್ದೇನೆ. ಅಲ್ಲಿನ ರಸ್ತೆಗಳು ಕೆಟ್ಟ ಪರಿಸ್ಥಿತಿಯಲ್ಲಿವೆ. ಅಷ್ಟೇನೂ ಹೇಳಿಕೊಳ್ಳುವಷ್ಟು ಅಭಿವೃದ್ಧಿಯೂ ಸಹ ಆಗಿಲ್ಲ ಎಂದರು. ಇನ್ನಿ ಇವಿಎಂ ದುರ್ಬಳಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಮಹಾರಾಷ್ಟ್ರದ ಚುನಾವಣೆಯಲ್ಲಿ ಬಿಜೆಪಿಯವರು ಮತಯಂತ್ರಗಳನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗನಿಸುತ್ತದೆ ಎಂದ್ರು.

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ

ಜನರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ:
ರಾಜ್ಯದಲ್ಲಿ ಮತ್ತೆ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ ಜನತೆ ತೀರಾ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಮೂರನೇ ಬಾರಿ ಮಳೆಯಿಂದಾಗಿ ಜನತೆ ತತ್ತರಿಸಿದ್ದು, ಈ ಬಗ್ಗೆ ಸರ್ಕಾರ ಸೂಕ್ತ ಗಮನಹರಿಸುತ್ತಿಲ್ಲ ಎಂದು ಕಿಡಿಕಾರಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸಂತ್ರಸ್ತರಿಗೆ ಪರಿಹಾರ ಕೊಡುತ್ತೇನೆ ಎಂದು ಹೇಳಿದರು. ಆದರೆ, ಇದುವರೆಗೂ ಇದರ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ಇಲ್ಲಿಯವರೆಗೆ ನಾವೂ ಸಹ ಕಾದು ನೋಡಿದೆವು. ಇದಕ್ಕೆ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ನಾವು ನಾಳೆ ಈ ಸಂಬಂಧ ಪ್ರತಿಭಟನೆ ಮಾಡಲಿದ್ದೇವೆ ಎಂದರು.

ಸಾವರ್ಕರ್ ವಿಚಾರ:ಸಾವರ್ಕರ್ ಅವರ ಬಗ್ಗೆ ನೀಡಿದ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಮಹಾತ್ಮ ಗಾಂಧೀಜಿ ಕೊಲೆಯಲ್ಲಿ ಅವರೂ ಒಬ್ಬ ಆರೋಪಿ. ಕೆಲವೊಂದು ಸಾಕ್ಷಾಧಾರಗಳ ಕೊರತೆ ಇದೆ. ಹಾಗಂತ ಅವರು ಆರೋಪಿಯೇ ಅಲ್ಲ ಎಂದು ಹೇಳೋಕೆ ಆಗುತ್ತಾ? ಎಂದರು. ಸಾವರ್ಕರ್ ಹಿಂದುತ್ವ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಅಂತವರಿಗೆ ಭಾರತ ರತ್ನ ಕೊಡುವುದು ಬೇಡ. ಬದಲಾಗಿ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಇಂತಹ ಪ್ರಶಸ್ತಿ ನೀಡುವುದು ಸೂಕ್ತ ಎಂದರು.

Last Updated : Oct 22, 2019, 4:04 PM IST

ABOUT THE AUTHOR

...view details