ಧಾರವಾಡ: ವೀರಶೈವ ಲಿಂಗಾಯತರಿಗೆ ಒಬಿಸಿ ಮೀಸಲಾತಿ ನೀಡುವಂತೆ ಶಿಫಾರಸು ಸಲ್ಲಿಸಲು ಮುಂದಾದ ಸಿಎಂ ಬಿಎಸ್ವೈ ಅವರಿಗೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ ಎಂದು ವಿರೋಧಿಸಿ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಧಾರವಾಡದಲ್ಲಿ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.
ಲಿಂಗಾಯತ ಮಹಾಸಭಾದಿಂದ ವಿನೂತನ ಪ್ರತಿಭಟನೆ ಧಾರವಾಡ ಕಲಾಭವನದಲ್ಲಿ ಜಮಾಯಿಸಿದ ವೀರಶೈವ ಲಿಂಗಾಯತ ಮಹಾಸಭಾ ಸದಸ್ಯರು, ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸರ್ಕಾರ ಒಬಿಸಿ ಮೀಸಲಾತಿ ನೀಡಬೇಕಾಗಿದ್ದು, ಇದಕ್ಕಾಗಿಯೇ ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಮುಂದಾಗಿದ್ದರು.
ಆದರೆ ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಸಿಎಂಗೆ ದೂರವಾಣಿ ಕರೆ ಮಾಡಿ, ಶಿಫಾರಸು ಮಾಡದಂತೆ ತಡೆ ನೀಡಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ. ಹಾಗಾಗಿ ಇಷ್ಟಲಿಂಗ, ವಿಭೂತಿ ಹಾಗೂ ರುದ್ರಾಕ್ಷಿಯನ್ನು ಕೇಂದ್ರ ಸರ್ಕಾರ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಕೊರಿಯರ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಇವುಗಳನ್ನು ನೋಡಿಯಾದರೂ ಅಮಿತ್ ಶಾ ಅವರು ಲಿಂಗಾಯತರ ಬಗ್ಗೆ ತಿಳಿದುಕೊಳ್ಳಬೇಕು. ಹೀಗಾಗಿ ನಮ್ಮ ಧರ್ಮದ ಲಾಂಛನಗಳನ್ನು ಕಳುಹಿಸಿಕೊಡುತ್ತಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ:ವೀರಶೈವ-ಲಿಂಗಾಯತ ಸಮುದಾಯಕ್ಕೆ ಓಬಿಸಿ ಮೀಸಲು.. ಆಶಾಭಂಗ ಆಗಲಿಲ್ವಂತಾರೆ ಸಚಿವ ಸೋಮಣ್ಣ