ಧಾರವಾಡ:ವಿವಾಹ ನಿಶ್ಚಯ ಮಾಡಿಕೊಳ್ಳಬೇಕಿದ್ದ ಬಾಲಕಿಯೊಬ್ಬಳು ಅತ್ತೆಯ ಮನೆಯಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟ ಘಟನೆ ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ನರೇಂದ್ರ ಗ್ರಾಮದ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಬಾಲಕಿಯನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಬಾಲಕಿಯ ಕುಟುಂಬದವರು ಆರೋಪಿಸಿದ್ದಾರೆ.
ಅತ್ತೆ, ಅತ್ತೆ ಮಗನ ಮೇಲೆ ಯುವತಿಯ ಮನೆಯವರು ಆರೋಪ ಮಾಡಿದ್ದಾರೆ. 16 ವರ್ಷದ ಬಾಲಕಿಯೇ ಮೃತ ದುರ್ದೈವಿಯಾಗಿದ್ದು, ಈಕೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗ್ರಾಮವೊಂದರ ನಿವಾಸಿ. ಅತ್ತೆ ಶಾಂತಾ, ಅತ್ತೆ ಮಗ ಭೀಮಶಿ ಮೇಲೆ ಕೊಲೆ ಆರೋಪ ಮಾಡಲಾಗಿದೆ.
ಬಾಲಕಿಯನ್ನು ಮದುವೆಯಾಗುವ ಕುರಿತು ಭೀಮಸಿ ಮನೆಯವರು ವಿರೋಧ ಮಾಡಿದ್ದರು. ಅದರಿಂದ ಭೀಮಸಿ ಬಾಲಕಿಯನ್ನು ಮನೆಗೆ ಕರೆ ತಂದಿದ್ದ. ಆತ ಬಾಲಕಿಯನ್ನು ಕರೆದೊಯ್ದು ಅಪಹರಣ ಮಾಡಿ ರೇಪ್ ಮಾಡಿದ್ದಾನೆ. ಆದ್ದರಿಂದ ಅವನಿಗೇ ಮಗಳನ್ನು ಕೊಟ್ಟು ಮದುವೆ ಮಾಡುವುದಾಗಿ ನಿಶ್ಚಯ ಮಾಡಲು ಯುವತಿಯ ಪೋಷಕರು ಮುಂದಾಗಿದ್ದರು. ಆದರೆ ಇದೀಗ ಬಾಲಕಿ ಮಾತ್ರ ಶವವಾಗಿದ್ದಾಳೆ. ಬಾಲಕಿಯ ಮನೆಯವರು ಭೀಮಸಿ ಮತ್ತು ಆತನ ತಾಯಿ ಮೇಲೆ ಕೊಲೆ ಆರೋಪ ಮಾಡಿ ಧಾರವಾಡ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.