ಕರ್ನಾಟಕ

karnataka

ETV Bharat / state

ಗ್ಲಾಸ್​ ಹೌಸ್​ ಹೊಂಡಕ್ಕೆ ಬಿದ್ದು ಬಾಲಕಿ ಸಾವು ಪ್ರಕರಣ: ಪರಿಹಾರ ನೀಡಲು ಪೋಷಕರ ಒತ್ತಾಯ - ಹುಬ್ಬಳ್ಳಿ ಇತ್ತೀಚಿನ ಅಪರಾಧ ಸುದ್ದಿ

ಸೆ.28ರಂದು ಹುಬ್ಬಳ್ಳಿಯ ಗ್ಲಾಸ್ ಹೌಸ್​ನ ಮಳೆ ನೀರಿನ ಕೊಯ್ಲಿನ ಹೊಂಡಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿದ್ದು, ಆಕೆಯ ಕುಟುಂಬಕ್ಕೆ ಇನ್ನೂ ಪರಿಹಾರ ಒದಗಿಸಿಲ್ಲ ಎಂದು ಕುಟುಂಬಸ್ಥರು ಹಾಗೂ ಸಮತಾ ಸೇನೆ ಸಂಘಟನೆ ಕಾರ್ಯಕರ್ತರು ಸ್ಮಾರ್ಟ್ ಸಿಟಿ ಕಚೇರಿಯ ಎದುರಿಗೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಬಾಲಕಿ ಪೋಷಕರ ಪ್ರತಿಭಟನೆ
ಬಾಲಕಿ ಪೋಷಕರ ಪ್ರತಿಭಟನೆ

By

Published : Oct 1, 2020, 1:35 PM IST

ಹುಬ್ಬಳ್ಳಿ:ಸೆ.28ರಂದು ನಗರದ ಗ್ಲಾಸ್ ಹೌಸ್​ನ ಮಳೆ ನೀರು ಕೊಯ್ಲಿನ ಹೊಂಡಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿದ್ದಳು. ಈ ಘಟನೆ ನಡೆದು ಮೂರು ದಿನ ಕಳೆದರೂ ಬಾಲಕಿ ಕುಟುಂಬಕ್ಕೆ ಪರಿಹಾರ ನೀಡಿಲ್ಲ ಎಂದು ಕುಟುಂಬಸ್ಥರು ಹಾಗೂ ಸಮತಾ ಸೇನೆ ಸಂಘಟನೆ ಕಾರ್ಯಕರ್ತರು ಸ್ಮಾರ್ಟ್ ಸಿಟಿ ಕಚೇರಿ ಎದುರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಘಟನೆ ವಿವರ ಪಡೆದುಕೊಂಡು ಬಾಲಕಿ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ಹೇಳಿದ್ದ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲವೆಂದು ಬಾಲಕಿಯ ತಂದೆ ಪರಶುರಾಮ ಯರಂಗಳಿ ಆರೋಪಿಸಿದರು.

ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಹಾರ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ABOUT THE AUTHOR

...view details