ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ ನೇಣಿಗೆ ಶರಣು.. ಭಾವಿ ಪತಿಯಿಂದಲೇ ಕಿರುಕುಳ? - ಯುವಕನಿಂದ ಯುವತಿಗೆ ಕಿರುಕುಳ ಪ್ರಕರಣ

ಮದುವೆ ನಿಶ್ಚಯಗೊಂಡಿದ್ದ ಯುವತಿ ನೇಣಿಗೆ ಶರಣಾದ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಆಕೆಯನ್ನು ವರಿಸಬೇಕಿದ್ದ ಯುವಕನ ಕಿರುಕುಳವೇ ಆತ್ಮಹತ್ಯೆಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

girl-committed-suicide-in-hubballi
ಮದುವೆ ನಿಶ್ಚಯಗೊಂಡ ಯುವತಿ ನೇಣಿಗೆ ಶರಣು

By

Published : Nov 13, 2021, 5:59 PM IST

Updated : Nov 13, 2021, 7:02 PM IST

ಹುಬ್ಬಳ್ಳಿ:ಮದುವೆ ನಿಶ್ಚಯಗೊಂಡು,ಮುಂದಿನ ಜೀವನದ ಬಗ್ಗೆ ನೂರಾರು ಕನಸು ಕಂಡಿದ್ದ ಯುವತಿ ನೇಣಿಗೆ ಶರಣಾಗಿದ್ದಾಳೆ. ಕೈ ಹಿಡಿದು ಬಾಳಿನ ಮುಂದಿನ ಪಯಣಕ್ಕೆ ಜೊತೆಯಾಗಬೇಕಿದ್ದ ವ್ಯಕ್ತಿಯೇ ಆಕೆಯ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ.

ಪವಿತ್ರ-ಅಭಿನಂದನ್

ಹುಬ್ಬಳ್ಳಿಯ ಪ್ರಶಾಂತ ನಗರ ನಿವಾಸಿ ಪವಿತ್ರ ಪಾಟೀಲ ಆತ್ಮಹತ್ಯೆ ಮಾಡಿಕೊಂಡವಳು. ಇವಳಿಗೆ ಮೂಲತಃ ಹಾವೇರಿಯ ಅಭಿನಂದನ್​ ಎಂಬಾತನ ಜೊತೆ ಡಿಸೆಂಬರ್ 2ಕ್ಕೆ ವಿವಾಹ ನಿಶ್ಚಯವಾಗಿತ್ತು. ಆದರೆ ವಿವಾಹಕ್ಕೆ 20 ದಿನವಿರುವಾಗಲೇ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಅಭಿನಂದನ್​ನ ಕಿರುಕುಳವೇ ಆಕೆಯ ಸಾವಿಗೆ ಕಾರಣ ಎನ್ನಲಾಗುತ್ತಿದೆ.

ಪ್ರೀ ವೆಡ್ಡಿಂಗ್​ ಶೂಟ್​:

ಇತ್ತೀಚೆಗೆ ಪವಿತ್ರಳನ್ನು ಅಭಿನಂದನ್ ​ದಾಂಡೇಲಿಗೆ ಪ್ರೀ ವೆಡ್ಡಿಂಗ್ ಶೂಟ್​​ಗೆಂದು ಕರೆದೊಯ್ದಿದ್ದ. ಅಲ್ಲಿಂದ ಬಂದ ಬಳಿಕ ಅಭಿನಂದನ್​ಗೆ ಅವಳ ಮೇಲೆ ಅನುಮಾನದ ಪಿಶಾಚಿ ಹೆಚ್ಚಾಗಿತ್ತು. ಅವಳ ಶೀಲದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿ ನಿತ್ಯ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಪವಿತ್ರ ಒಂದೆರೆಡು ಬಾರಿ ಮನೆಯಲ್ಲೂ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಳು. ಆದರೆ ಮದುವೆಯಾದ ಬಳಿಕ ಎಲ್ಲಾ ಸರಿಹೋಗಬಹುದು ಅಂತ ಮನೆಯವರು ಸುಮ್ಮನಾಗಿದ್ದರು ಎನ್ನಲಾಗ್ತಿದೆ.

ಮದುವೆ ನಿಶ್ಚಯವಾಗಿದ್ದ ಯುವತಿ ನೇಣಿಗೆ ಶರಣು

ಸದ್ಯದಲ್ಲೇ ಹಸೆಮಣೆ ಏರಬೇಕಿದ್ದ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ವಿರೋಧ ಮಧ್ಯೆಯೂ ಬಾರ್​ ಓಪನ್​ : ಮದ್ಯದಂಗಡಿ ಪೀಠೋಪಕರಣ ಧ್ವಂಸ ಮಾಡಿದ ಮಹಿಳೆಯರು

Last Updated : Nov 13, 2021, 7:02 PM IST

ABOUT THE AUTHOR

...view details