ಹುಬ್ಬಳ್ಳಿ:ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ನೇತೃತ್ವದಲ್ಲಿ ರಾಷ್ಟ್ರಧ್ವಜ ರಕ್ಷಣಾ ಅಭಿಯಾನ ನಡೆಯುತ್ತಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸ್ವಗೃಹಕ್ಕೆ ಭೇಟಿ ನೀಡಿದ ಇವರ ತಂಡ ರಾಷ್ಟ್ರಧ್ವಜ ಕಾಣಿಕೆ ನೀಡಿತು. ಈ ಸಂದರ್ಭದಲ್ಲಿ ಖಾದಿಯಿಂದ ತಯಾರಿಸಿದ ಧ್ವಜವನ್ನೇ ಮನೆಯ ಮೇಲೆ ಹಾರಿಸುವಂತೆಯೂ ಮನವಿ ಮಾಡಿದ್ದಾರೆ. ಈಗಾಗಲೇ ಚೀನಾ ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ ಇಂತಹ ನಿರ್ಧಾರದ ಮೂಲಕ ದೇಶೀಯತೆಗೆ ಹೊಡೆತ ಕೊಟ್ಟಿದೆ. ಕೇಂದ್ರದ ಈ ನೀತಿಯನ್ನು ಕೈಬಿಟ್ಟು ಖಾದಿ ಉಳಿವಿಗಾಗಿ ಕೈ ಜೋಡಿಸುವಂತೆ ಶೆಟ್ಟರ್‌ಗೆ ಉಳ್ಳಾಗಡ್ಡಿಮಠ ಮನವಿ ಮಾಡಿದರು.
ಶೆಟ್ಟರ್‌ಗೆ ಖಾದಿ ರಾಷ್ಟ್ರೀಯ ಧ್ವಜ ನೀಡಿ ಕೇಂದ್ರ ನಡೆಗೆ ಕೈ ಮುಖಂಡರ ವಿರೋಧ - ಮಾಜಿ ಸಿಎಂ ಜಗದೀಶ್ ಶೆಟ್ಟರ್
ಹುಬ್ಬಳ್ಳಿಯ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಅವರಿಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಖಾದಿ ಧ್ವಜ ಕೊಡುಗೆಯಾಗಿ ನೀಡುವ ಮೂಲಕ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿದ್ದಾರೆ.
ಶೆಟ್ಟರ್‌ಗೆ ಖಾದಿ ರಾಷ್ಟ್ರೀಯ ಧ್ವಜದ ಕೊಡುಗೆ