ಹುಬ್ಬಳ್ಳಿ:ಎಲ್ಪಿಜಿ ಪೈಪ್ಲೈನ್ ಒಡೆದ ಪರಿಣಾಮ ಕೆಲ ಕಾಲ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಹುಬ್ಬಳ್ಳಿ ಹಳೇ ಬಾದಾಮಿನಗರದ 1ನೇ ಕ್ರಾಸ್ನಲ್ಲಿ ಈ ಘಟನೆ ನಡೆದಿದೆ.
ಐಒಎಜಿ ಕಂಪನಿಯ ಪೈಪ್ಲೈನ್ ಮಧ್ಯಾಹ್ನ 1 ಗಂಟೆ ಸುಮಾರಿಗೆ ಒಡೆದಿದ್ದು, ಸ್ಥಳೀಯರು ಆತಂಕಗೊಂಡಿದ್ದರು. ಸ್ಥಳಕ್ಕೆ ದೌಡಾಯಿಸಿದ ಐಒಎಜಿ ಸಿಬ್ಬಂದಿ ಮೇನ್ ವಾಲ್ವ್ ಬಂದ್ ಮಾಡಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು. ಅಲ್ಲದೇ ಕೂಡಲೇ ದುರಸ್ತಿ ಕಾರ್ಯ ಪ್ರಾರಂಭಿಸಿದರು.