ಹುಬ್ಬಳ್ಳಿ: ಗಂಗಿವಾಳ ಗ್ರಾಮ ಪಂಚಾಯತ್ ಸದಸ್ಯ ದೀಪಕ್ ಪಟದಾರಿ ಹತ್ಯೆಗೆ ಸಂಬಂದಿಸಿದಂತೆ ಯಾವುದೇ ರೀತಿಯ ನ್ಯಾಯ ದೊರೆತಿಲ್ಲ. ಆರೋಪಿಗಳಿನ್ನು ಪ್ರಕರಣದಿಂದ ಉಳಿಸುವ ನಿಟ್ಟಿನಲ್ಲಿ ಪೊಲೀಸರೇ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂದು ಹತ್ಯೆಯಾದ ದೀಪಕ್ ಪಟದಾರಿ ಪತ್ನಿ ಪುಷ್ಪಾ ಪಟದಾರಿ ಆರೋಪಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಪತಿ ಹತ್ಯೆಯಾಗಿ ಸುಮಾರು ಎರಡೂವರೆ ತಿಂಗಳು ಕಳೆದಿದ್ದು, ನಮಗೆ ಯಾವುದೇ ರೀತಿಯ ನ್ಯಾಯ ದೊರೆತಿಲ್ಲ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಪೊಲೀಸರ ಮೇಲೆ ಯಾವುದೇ ನಂಬಿಕೆ ಇಲ್ಲ. ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ಕೇಳಿದ್ರೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ದೂರಿದರು.
ಆರೋಪಿಗಳು ಪೊಲೀಸರಿಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ ಈ ಹಿನ್ನೆಲೆಯಲ್ಲಿ ಆರೋಪಿಗಳ ಪರ ಪೊಲೀಸರು ಇದ್ದಾರೆ. ಯಲ್ಲಪ್ಪ ಶಂಕ್ರಪ್ಪ ಮೇಟಿ, ರುದ್ರಪ್ಪ ಶಂಕ್ರಪ್ಪ ಮೇಟಿ, ನಾಗರಾಜ್ ಮಲ್ಲಪ್ಪ ಹೆಗ್ಗಣ್ಣವರ ಅವರ ಬಂಧನವಾಗಿಲ್ಲ ಎಂದು ಆರೋಪಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರರಿಂದ ನ್ಯಾಯ ದೊರೆತಿಲ್ಲ ಆದ್ದರಿಂದ ಸಿಐಡಿ ತನಿಖೆ ಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು. ಹತ್ಯೆಗೆ ಸಂಬಂಧಿಸಿದಂತೆ ಕಾಣದ ಕೈಗಳ ಕೈವಾಡವಿದ್ದು, ಪ್ರಕರಣವನ್ನು ಮುಚ್ಚಿ ಹಾಕಲು ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಬದಲಾವಣೆ ಮಾಡಲಾಗಿದೆ ಎಂಬ ಸಂಶಯ ಮೂಡಿ ಬಂದಿದೆ. ಹೀಗಾಗಿ ಕೂಡಲೇ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಮೃತನ ಸಹೋದರ ಆಗ್ರಹಿಸಿದರು.
ಇದನ್ನೂ ಓದಿ:ಕೇರಳದಲ್ಲಿ 2.5 ಕೋಟಿ ಮೌಲ್ಯದ ಚಿನ್ನ ವಶ: ಇಂಡಿಗೋ ಏರ್‌ಲೈನ್ಸ್‌ನ ಇಬ್ಬರು ಉದ್ಯೋಗಿಗಳ ಬಂಧನ