ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಗಣೇಶನ ಆಚರಣೆ ಅಂದರೇ ರಾಜ್ಯದ ಜನರ ದೃಷ್ಟಿಯನ್ನು ತನ್ನತ್ತ ಸೆಳೆಯುವಂತೆ ಮಾಡುವ ಹಬ್ಬ. ಆದರೆ, ಕೊರೊನಾದಿಂದಾಗಿ ಸಂಭ್ರಮ ಸಂಪೂರ್ಣ ಸಪ್ಪೆಯಾಗಿದೆ. ಡಿಜೆ ಅಬ್ಬರವಿಲ್ಲದೇ ವಾಣಿಜ್ಯನಗರಿಯೇ ಸಂಪೂರ್ಣ ಸೈಲೆಂಟ್ ಆಗಿದೆ.
ಗಣೇಶೋತ್ಸವ ಆಚರಣೆಯಲ್ಲಿ ಡಿಜೆ ಸೌಂಡ್ ಸೈಲೆಂಟ್ ನಗರದ ಗಣೇಶನ ವಿಸರ್ಜನೆ ಹಾಗೂ ಆಚರಣೆ ನೋಡಲು ಜನರು ದೇಶದ ವಿವಿಧ ಮೂಲೆಗಳಿಂದ ಆಗಮಿಸುತ್ತಿದ್ದರು. ಆದರೆ, ಈಗ ಶಾಂತಿಯುತ ಆಚರಣೆಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಕಮಿಷನರೇಟ್ ನಿರ್ಧಾರವನ್ನು ಕೈಗೊಂಡಿದೆ.
ಎಲ್ಲೆಡೆಯೂ ಡಿಜೆಸೌಂಡ್, ಸಖತ್ ಡ್ಯಾನ್ಸ್‌ನಿಂದ ಕೂಡಿರುತ್ತಿದ್ದ ಹುಬ್ಬಳ್ಳಿ ಗಣೇಶೋತ್ಸವ ಈಗ ಸೈಲೆಂಟ್ ಆಗಿದೆ. ಇನ್ನು, ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಗಣೇಶ ಮಂಡಳಿಗಳು ಕೋವಿಡ್ ನಿಯಮ ಪಾಲಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ವರ್ಷವೂ ಗಣೇಶ ಮೆರವಣಿಗೆಗೆ ಅವಕಾಶ ನಿರಾಕರಿಸಲಾಗಿದೆ. ಕೇವಲ 20 ಜನರು ಮಾತ್ರ ಗಣೇಶ ವಿಸರ್ಜನೆಯಲ್ಲಿ ಪಾಲ್ಗೊಳ್ಳಲು ಸೂಚನೆ ನೀಡಲಾಗಿದ್ದು, ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದಿದೆ.
ಇದನ್ನೂ ಓದಿ : ಕೋಲಾರ : ಅಫ್ಘಾನ್ ಸೇರಿ ಪ್ರಚಲಿತ ವಿದ್ಯಮಾನಗಳ ಚಿತ್ರವಿಟ್ಟು ಶಿಕ್ಷಕನಿಂದ ವಿಶೇಷ ಗಣೇಶೋತ್ಸವ