ಕರ್ನಾಟಕ

karnataka

ETV Bharat / state

ಮಸೀದಿಯಲ್ಲಿ ಗಣೇಶ-ಮೊಹರಂ ಆಚರಣೆ: ಸೌಹಾರ್ದತೆಗೆ ಸಾಕ್ಷಿಯಾದ ಧಾರವಾಡ

ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಮಸೀದಿಯಲ್ಲಿ ಗಣೇಶ ಮೂರ್ತಿ ಪ್ರತಿಷಷ್ಠಾಪಿಸಲಾಗಿದ್ದು, ಜೊತೆಗೆ ಪಂಜಾಗಳಿಗೂ ಪೂಜೆ ಸಲ್ಲಿಸಲಾಗುತ್ತಿದೆ. ಈ ಭಾವೈಕ್ಯತೆಯ ಹಬ್ಬ ಎಲ್ಲರಿಗೂ ಮಾದರಿಯಾಗಿದೆ.

ಭಾವೈಕ್ಯತೆಯಿಂದ ಹಬ್ಬ ಆಚರಣೆ
ಭಾವೈಕ್ಯತೆಯಿಂದ ಹಬ್ಬ ಆಚರಣೆ

By

Published : Aug 30, 2020, 11:07 AM IST

Updated : Aug 30, 2020, 1:11 PM IST

ಧಾರವಾಡ: ಮಸೀದಿಯಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಧಾರವಾಡ ತಾಲೂಕಿನ ನರೇಂದ್ರ ಗ್ರಾಮ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ನರೇಂದ್ರ ಗ್ರಾಮದ ಮಸೂತಿ ಓಣಿಯ ಮಸೀದಿಯಲ್ಲಿ ಚನ್ನಬಸವೇಶ್ವರ ಯುವಕ ಮಂಡಳಿಯ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿನೆ ಮಾಡಲಾಗಿದೆ. ಮಸೀದಿಯಲ್ಲಿ ಒಂದೆಡೆ ಗಣೇಶ, ಮತ್ತೊಂದೆಡೆ‌ ಮೊಹರಂ ಪಂಜಾವನ್ನು ಸಹ ಪ್ರತಿಷ್ಠಾಪನೆ ಮಾಡಿ ಗ್ರಾಮಸ್ಥರು ಭಾವೈಕ್ಯೆತೆಯಿಂದ ಹಬ್ಬ ಆಚರಿಸುತ್ತಿದ್ದಾರೆ.

ಇಂದು ಮೊಹರಂ ಹಬ್ಬದ ಕೊನೆಯ ದಿನವಾದ ಹಿನ್ನೆಲೆಯಲ್ಲಿ ಗಣೇಶ ಮತ್ತು ಪಂಜಾಗಳಿಗೆ ಭಾವೈಕ್ಯತೆಯಿಂದ ಪೂಜೆ ಮಾಡಿ ಹಿಂದೂ-ಮುಸ್ಲಿಂ ಬಾಂಧವರು ಸೇರಿ ಗಣೇಶ ಮತ್ತು ಮೊಹರಂ ಹಬ್ಬ ಆಚರಣೆ ಮಾಡುತ್ತಿದ್ದಾರೆ.

ಭಾವೈಕ್ಯತೆಯಿಂದ ಹಬ್ಬ ಆಚರಣೆ

ಒಟ್ಟಿನಲ್ಲಿ ಧರ್ಮಗಳ ಹೆಸರಿನಲ್ಲಿ ಶಾಂತಿ ಸುವ್ಯವಸ್ಥೆ ಕದಡುವವರ ಮಧ್ಯೆ ಗ್ರಾಮೀಣ ಭಾಗಗಳಲ್ಲಿ ಸೌಹಾರ್ದತೆಯಿಂದ ಹಬ್ಬ ಆಚರಣೆ ಮಾಡುತ್ತಿರುವುದು ಮಾದರಿ ನಡೆಯಾಗಿದೆ.

Last Updated : Aug 30, 2020, 1:11 PM IST

ABOUT THE AUTHOR

...view details