ಕರ್ನಾಟಕ

karnataka

ETV Bharat / state

ಇಳಕಲ್ ಸೀರೆ ಮೇಲೆ ಗೋಲ್ಡ್​ ಫಿಶ್​, ಬುದ್ಧ... ಕಲಾತ್ಮಕ ಟಚ್​ ನೀಡಿ ಮೆರಗು ಹೆಚ್ಚಿಸಿದ ಕಲಾವಿದ - ilikal saree artist from hubli

ಉತ್ತರ ಕರ್ನಾಟಕ ಭಾಗದ ಪ್ರಸಿದ್ಧಇಳಕಲ್ ಸೀರೆಗೆ ಕಲಾವಿದರೊಬ್ಬರು ಕಲೆಯ ಟಚ್ ‌‌ನೀಡಿ ಮತ್ತಷ್ಟು ಮೆರಗು ನೀಡಿದ್ದಾರೆ.

ರಂಗು ರಂಗಿನ ಇಳಕಲ್​​ ಸೀರೆ

By

Published : Nov 8, 2019, 10:40 AM IST

ಹುಬ್ಬಳ್ಳಿ:ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ಇಳಕಲ್ ಸೀರೆಗೆ ಕಲಾವಿದರೊಬ್ಬರು ಕಲೆಯ ಟಚ್ ‌‌ನೀಡಿ ಮತ್ತಷ್ಟು ಮೆರಗು ನೀಡುವಂತೆ ಮಾಡಿದ್ದಾರೆ.

ರಂಗು ರಂಗಿನ ಇಳಕಲ್​​ ಸೀರೆ

ಹುಬ್ಬಳ್ಳಿ ನಗರದ ನಿವಾಸಿ ಕಲಾವಿದ ಗಣೇಶ ಎಸ್ ಸಾಬೋಜಿ ಎನ್ನುವರೇ ಇಳಕಲ್ ಸೀರೆಯ ಸೊಬಗು ಅಂದ ಚಂದ ಹೆಚ್ಚಿಸಿದವರು. ಇಳಕಲ್ ಸೀರೆಯನ್ನು ತನ್ನ ಪೇಂಟಿಂಗ್ ಮೂಲಕ ಅದರ ಸೂಕ್ಷ್ಮತೆಯನ್ನು ಎಳೆ ಎಳೆಯಾಗಿ ಬಿಡಿಸಿ ಎಲ್ಲರ ಚಿತ್ತವನ್ನು ಸೀರೆಯತ್ತ ಸೆಳೆಯುವಂತೆ ಮಾಡಿದ್ದಾರೆ.

ರಂಗು ರಂಗಿನ ಇಳಕಲ್​​ ಸೀರೆ

ಇಳಕಲ್ ಸೀರೆಯಲ್ಲಿ ಗಣೇಶ ಗೋಲ್ಡ್ ಫಿಶ್ ಮೀನುಗಳಿಗೆ ಇಳಕಲ್​​ ಸೀರೆ ಉಡಿಸುವುದು ಕಾಮಣ್ಣನ ಇಳಕಲ್ ಸೀರೆ, ಹೀಗೆ ಹಲವಾರು ರೀತಿಯ ಸೀರೆಯಲ್ಲಿ ಪೇಂಟಿಂಗ್ ಮಾಡುತ್ತಾರೆ. ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರ ಪೇಂಟಿಂಗ್ ಮಾಡಿ ಜನರ ಮನ ಸೆಳೆದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಇಳಕಲ್ ಸೀರೆಯನ್ನು ನಮ್ಮ ಹಿರಿಯರ ಕಾಲದಿಂದಲೂ ಹೆಂಗಸರು ಉಡುವ ಆಚರಣೆ ಇದೆ.ಈ ರೀತಿ ವಿಶಿಷ್ಟತೆ ಹೊಂದಿದ್ದ ಈ ಸೀರೆಯನ್ನು ನಾನು ನನ್ನ ಪೇಂಟಿಂಗ್ ಶೈಲಿಯನ್ನಾಗಿ ಏಕೆ ಇಟ್ಟುಕೊಳ್ಳಬಾರದು ಎನಿಸಿತ್ತು ಅಂದಿನಿಂದ ಇಳಕಲ್ ಸೀರೆ ಪೇಂಟಿಂಗ್ ಮಾಡಲು ಮುಂದಾದೆ ಎನ್ನುತ್ತಾರೆ ಕಲಾವಿದ ಗಣೇಶ.

ರಂಗು ರಂಗಿನ ಇಳಕಲ್​​ ಸೀರೆ

ಗಣೇಶ ಎಂಬಿಎ, ಬಿವಿಎ, ಹಾಗೂ ಎಮ್ಎಫ್ಎ ಪದವಿ ಪಡೆದಿದ್ದಾರೆ .ಪ್ರಸ್ತುತ ಆರ್​​​ಎಮ್​​​ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಡ್ರಾಯಿಂಗ್ ಟೀಚರ್ ಆಗಿ ಕೆಲಸ ಮಾಡುತ್ತಿದ್ದಾರೆ.ಗಣೇಶ ಅವರು 2015 ರಲ್ಲಿ ರಾಜ್ಯ ಮಟ್ಟದ ಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಇವರ ಚಿತ್ರಕಲಾ ಪ್ರದರ್ಶನ ಸಿರಸಂಗಿ, ಚಿತ್ರ ಸಂತೆ ಬೆಂಗಳೂರು, ಕಲಾ ಹುಬ್ಬಳ್ಳಿ, ಚಿತ್ರಸಂತೆ ಸುತ್ತುರು ಮೈಸೂರು, ಕಲಾವೈಭವ ಗ್ರೂಪ್ ಚಿತ್ರಕಲಾ, ಪ್ರದರ್ಶನ ಧಾರವಾಡ ಹುಬ್ಬಳ್ಳಿ ಹೀಗೆ ಹದಿನೈದಕ್ಕೆ ಹೆಚ್ಚು ಚಿತ್ರಕಲಾ ಪ್ರದರ್ಶನ ಗೊಂಡಿವೆ. ಧಾರವಾಡದ ಜಿಲ್ಲಾ ಉತ್ಸವ, ಜಿಲ್ಲಾ ಮಟ್ಟದ ಕಲಾ ಸ್ಪರ್ಧೆ, ಮುಂಗಾರು ಜನಪರ ಕಾಲ ಶಿಬಿರ, ಹೀಗೆ ಸುಮಾರು 12 ಕ್ಯಾಂಪ್ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತರ ಕರ್ನಾಟಕದ ಇಳಕಲ್ ಸೀರೆಯನ್ನು ತಮ್ಮ ಕಲೆಯಲ್ಲಿ ತೋರಿಸುತ್ತ ಇದನ್ನು ಇಡೀ ರಾಜ್ಯ ಹಾಗೂ ದೇಶ ತಿರುಗಿ ನಿಂತು ನೋಡುವಂತೆ ಮಾಡಿದ್ದಾರೆ. ಗಣೇಶ ಎಸ್ ಸಾಬೋಜಿಯವರಿಗೆ ಇಂತಹ ವಿಶಿಷ್ಟ ಕಲೆಯನ್ನು ಗುರುತಿಸಿ ವಾರ್ಷಿಕ ಕಲಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ABOUT THE AUTHOR

...view details