ಸ್ಮಶಾನವಿಲ್ಲದೆ ಪರದಾಟ... ರಸ್ತೆ ಬದಿಯೇ ಮೃತರ ಅಂತ್ಯಸಂಸ್ಕಾರ! - people demanding for mortuary
ಹುಬ್ಬಳ್ಳಿ ಬಳಿಯ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದಲ್ಲಿ ಪ್ರತ್ಯೇಕ ರುದ್ರಭೂಮಿ ಇಲ್ಲದ ಕಾರಣ ಶವಸಂಸ್ಕಾರವನ್ನು ರಸ್ತೆ ಬದಿಯಲ್ಲೇ ನೆರವೇರಿಸಿರುವ ಘಟನೆ ನಡೆದಿದೆ.
ರುದ್ರಭೂಮಿ
ಹುಬ್ಬಳ್ಳಿ: ಸ್ಮಶಾನ ಇಲ್ಲದಿರುವುದರಿಂದ ರಸ್ತೆ ಪಕ್ಕದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿಸಿರುವ ಘಟನೆ ಕುಂದಗೋಳ ತಾಲೂಕಿನ ರಾಮನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಜಮೀನು ಹೊಂದಿದವರು ತಮ್ಮ ಜಮೀನಿನಲ್ಲಿ ಶವಸಂಸ್ಕಾರ ನಡೆಸುತ್ತಿದ್ದಾರೆ. ಜಮೀನು ಇಲ್ಲದವರು ರಸ್ತೆ ಪಕ್ಕದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸುವ ಅನಿವಾರ್ಯತೆ ಎದುರಾಗಿದ್ದು,ಕೂಡಲೇ ಜಿಲ್ಲಾಡಳಿತ ರುದ್ರಭೂಮಿ ಮಂಜೂರು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.