ಕರ್ನಾಟಕ

karnataka

ETV Bharat / state

ಮೊಬೈಲ್ ಕಳ್ಳರಿಗೆ ದುಃಸ್ವಪ್ನ ಈ KYM ತಂತ್ರಜ್ಞಾನ: ಹು-ಧಾ ಕಮೀಷನರೇಟ್​ನಿಂದ 112 ಮಂದಿಗೆ ಮರಳಿ ಕೈಸೇರಿದ ಮೊಬೈಲ್ - Mobile detection technology

‌KYM ಅಪ್ಲಿಕೇಶನ್​ ತಂತ್ರಜ್ಞಾನದಿಂದ ಹು-ಧಾ ಕಮೀಷನರೇಟ್​ ಮೊಬೈಲ್ ಕಳೆದುಕೊಂಡ 112 ಮೊಬೈಲ್​ಗಳನ್ನು ವಾರಸುದಾರರಿಗೆ ನೀಡಿದ್ದಾರೆ.

return mobile program
ಹು-ಧಾ ಕಮೀಷನರೇಟ್​ನಿಂದ ಮರಳಿ ಮೊಬೈಲ್

By

Published : Apr 30, 2023, 11:41 AM IST

Updated : Apr 30, 2023, 12:00 PM IST

ಮರಳಿ ಮೊಬೈಲ್​ ಕಾರ್ಯಕ್ರಮ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಮೊಬೈಲ್​ ಕಳ್ಳತನ ಹೆಚ್ಚಾಗಿದ್ದು ಪೊಲೀಸರಿಗೆ ಕಳ್ಳತನವಾದ ಮೊಬೈಲ್​ಗಳ ಹುಡುಕಾಟವೇ ದೊಡ್ಡ ಸವಾಲಾಗಿತ್ತು. ಇದರಿಂದ ಜಿಲ್ಲಾ ಪೊಲೀಸ್​ ತಂಡವು ಕಳ್ಳತನವಾದ ಮೊಬೈಲ್​ ಪತ್ತೆಗೆ ಸಹಾಯವಾಗಲು ಹೊಸ ತಂತ್ರಜ್ಞಾನ(KYM)ವನ್ನು ಬಳಸಿಕೊಳ್ಳಲು ಶುರುಮಾಡಿದರು. ಇದೀಗ ಇದೇ ತಂತ್ರಜ್ಞಾನದಿಂದ ಮೊಬೈಲ್ ಕಳೆದುಕೊಂಡ 112 ಮೊಬೈಲ್​ಗಳನ್ನು ವಾರಸುದಾರರಿಗೆ ಕೊಡಲಾಗಿದೆ.

ಈ ಮೂಲಕ ತಂತ್ರಜ್ಞಾನ ಬಳಸಿ ಈ ಮಹತ್ವದ ಕಾರ್ಯಕ್ಕೆ ಮುಂದಾಗಿರುವುದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ರಮಣ್ ಗುಪ್ತಾ ಹೇಳಿದ್ದಾರೆ. ಹು-ಧಾ ಕಮೀಷನರೇಟ್​ನಿಂದ ವಾರಸುದಾರರ ಮೊಬೈಲ್ ಫೋನ್​ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾಧ್ಯಮವದರೊಂದಿಗೆ ಮಾತನಾಡಿ, ಕಳ್ಳತನವಾದ ಮೊಬೈಲ್​ಗಳನ್ನು ವಾರಸುದಾರಿಗೆ ನೀಡುವ ಕಾರ್ಯಕ್ರಮ ಇದಾಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದರು.

ಕಳ್ಳತನವಾದ ಮೊಬೈಲ್​ನ್ನು ನೂರಕ್ಕೆ ನೂರರಷ್ಟು ಪತ್ತೆ ಮಾಡಲು ಆಗುವುದಿಲ್ಲ. ಆದರೇ ವಿಶಿಷ್ಟ ತಂತ್ರಜ್ಞಾನ ಬಳಸಿ ಪ್ರಯತ್ನ ಮಾಡಲಾಗುತ್ತಿದ್ದು, ನಮಗೆ ಮಾಹಿತಿ ಬಂದ ತಕ್ಷಣ ಹುಡುಕಿಕೊಡುವ ಪ್ರಾಮಾಣಿಕ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅಲ್ಲದೇ ಪ್ರತಿ ತಿಂಗಳು ಮೊಬೈಲ್ ವಾಪಸ್ ಕೊಡುವ ಕಾರ್ಯ ನಿರಂತರವಾಗಿರಲಿದೆ ಎಂದು ತಿಳಿಸಿದ್ದಾರೆ.

ಕಳೆದ 2 ತಿಂಗಳಿನಲ್ಲಿ 500ಕ್ಕೂ ಹೆಚ್ಚು ಮೊಬೈಲ್ ಪತ್ತೆ ಮಾಡುವ ಕೆಲಸ ಮಾಡಿದ್ದು, ಈ ನಿಟ್ಟಿನಲ್ಲಿ ಹೆಚ್ಚು ಮೊಬೈಲ್ ವಾಪಸ್​ ಮಾಡಿದ ಸಾಧನೆ‌ ಹು-ಧಾ ಪೊಲೀಸ್ ಕಮೀಷನರೇಟ್ ತಂಡ ಮಾಡಿದೆ. ಮುಂದೆಗೂ ಇಂತಹ ಕಾರ್ಯಕ್ರಮವನ್ನು ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.

ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಸ್​ನಲ್ಲಿ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ಇಂತಹ ಮೊಬೈಲ್ ಕಳ್ಳತನ ಪ್ರಕರಣಗಳು ಜರುಗಿವೆ. ಕಳೆದ ಎರಡು ವರ್ಷಗಳಿಂದ ಕಳ್ಳತನವಾದ ಮೊಬೈಲ್ ‌ಹುಡುಕುವ ಕೆಲಸ ಮಾಡಲಾಗುತ್ತಿದ್ದು, ಈವರೆಗೆ 5 ಸಾವಿರ ಕೇಸ್​ಗಳು ದಾಖಲಾಗಿವೆ. ಕೆಲವು ಪ್ರಕರಣದಲ್ಲಿ ಕಳ್ಳರನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ಅದರಲ್ಲಿ ಹೆಚ್ಚು ಕಳೆದುಕೊಂಡಿರುವ ಮೊಬೈಲ್​ಗಳು ಇರುತ್ತವೆ. ಆದರೇ ಏನಾದರೂ ಕಳ್ಳತನ ಪ್ರಕರಣ ಇದ್ದರೆ ಅಂತರವನ್ನು ‌ಬಂಧಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ‌KYM ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಕಾರ್ಯಕ್ರಮ ಮಾಡಲಾಗುವುದು. ಚುನಾವಣೆ ಮುಗಿದ ನಂತರ ಬೀಟ್ ವ್ಯವಸ್ಥೆ ಹೆಚ್ಚಿಗೆ ಮಾಡಲಾಗುವುದು. ಅಲ್ಲದೇ ಸಿಸಿಬಿ ಬಲಿಷ್ಠಗೊಳಿಸಲು ಬೇಕಾದ ಬೆಂಬಲ‌ ನೀಡಲಾಗುತ್ತಿದ್ದು, ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ದಾವಣೆಗೆರೆ/ CEIR ಪೋರ್ಟ್​ಲ್​ನಿಂದ ಕಳೆದು ಹೋದ ಮೊಬೈಲ್​ ವಾಪಾಸ್​ : ದಾವಣಗೆರೆಯಲ್ಲಿ ಮೊಬೈಲ್ ಕಳೆದುಕೊಂಡ ವ್ಯಕ್ತಿಯು ಕೂಡಲೇ ಬ್ರೌಸರ್​ವೊಂದರ ಮೂಲಕ ನೂತನ ಸಿಇಐಆರ್ ಪೋರ್ಟಲ್​ಗೆ ಭೇಟಿ ನೀಡಿ ತಮ್ಮ ಮೊಬೈಲ್​ನ ಸಂಪೂರ್ಣ ಮಾಹಿತಿ ನೀಡಿ, ನೋಂದಾಯಿಸಿದ್ದರು. ಇದರ ಮೂಲಕ ತಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ದಾವಣಗೆರೆ ಪೊಲೀಸರು ಈ ಪೋರ್ಟಲ್ ಸಹಾಯದಿಂದ ಮೊಬೈಲ್​ ಪತ್ತೆ ಮಾಡಿದ್ದರು.

ಇದನ್ನೂ ಓದಿ:ಸಿಇಐಆರ್ ಪೋರ್ಟಲ್ ನೆರವಿನಿಂದ ಮರಳಿ ಮಾಲೀಕನ ಕೈಸೇರಿದ ಮೊಬೈಲ್​

Last Updated : Apr 30, 2023, 12:00 PM IST

ABOUT THE AUTHOR

...view details