ಹುಬ್ಬಳ್ಳಿ:ಕ್ಯಾಬ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ರಮೇಶ ಅವರು ಸೈನಿಕರಿಗಾಗಿ ಕಳೆದ ಹಲವು ವರ್ಷಗಳಿಂದ ತಮ್ಮ ವಾಹನದಲ್ಲಿ ಉಚಿತ ಸೇವೆ ನೀಡುತ್ತಿದ್ದಾರೆ.
ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿಯಾಗಿರುವ ರಮೇಶ ಅವರು ಕಳೆದೆರಡು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಹಲವು ವರ್ಷಗಳಿಂದ ತಮ್ಮ ವಾಹನದಲ್ಲಿ ಸೈನಿಕರಿಗೆ ಉಚಿತ ಸೇವೆ ಒದಗಿಸುತ್ತಿದ್ದಾರೆ. ಭಾರತಾಂಬೆಯ ಸೇವೆ ಸಲ್ಲಿಸುವ ಯೋಧರಿಗೆ ನನ್ನ ಚಿಕ್ಕ ಅಳಿಲು ಸೇವೆ ಇದಯಾಗಿದೆ ಎನ್ನುತ್ತಾರೆ ರಮೇಶ.