ಹುಬ್ಬಳ್ಳಿ :ಕೊರೊನಾ ಸೋಂಕಿನ ಭೀತಿ ಹಿನ್ನೆಲೆ ಇಡೀ ದೇಶ ಲಾಕ್‌ಡೌನ್ ಆಗಿದೆ. ಇದರಿಂದ ನಿರಾಶ್ರಿತರು ಹಾಗೂ ಭಿಕ್ಷುಕರು ತುತ್ತು ಅನ್ನಕ್ಕೂ ಪರದಾಡುವಂತಾಗಿತ್ತು.
ಹುಬ್ಬಳ್ಳಿಯಲ್ಲಿ ಹಸಿದ ನಿರಾಶ್ರಿತರಿಗೆ ಆಹಾರ ವಿತರಣೆ.. ಇದರಾಗೇನೂ ಇಲ್ರೀ ಸಾಮಾಜಿಕ ಸೇವೆ ಅಷ್ಟೇ ರೀ..
ಲಾಕ್‌ಡೌನ್ ಆದ ಹಿನ್ನೆಲೆ ಭಿಕ್ಷುಕರಿಗೆ, ನಿರಾಶ್ರಿತರಿಗೆ ಆಹಾರ ಪೊಟ್ಟಣ ವಿತರಿಸಲಾಯಿತು. ಇನ್ನೊಂದೆಡೆ ಪೊಲೀಸರು ಕೂಡಾ ದೂರದ ಊರುಗಳಿಂದ ದುಡಿಮೆಗೆ ಬಂದಿದ್ದ ಕಾರ್ಮಿಕರಿಗೆ ಆಹಾರ ವಿತರಿಸಿದರು.
ನಿರಾಶ್ರಿತರಿಗೆ ಆಹಾರ ಪೊಟ್ಟಣ ವಿತರಣೆ
ಜೈನ್ ಸಮಾಜದ ಮುಖಂಡರು ಇವರಿಗೆಲ್ಲ ಆಹಾರ ವಿತರಿಸಿ ಮಾನವೀಯತೆ ತೋರಿದ್ದಾರೆ. ಅಷ್ಟೇ ಅಲ್ಲ, ನಗರದ ವಿವಿಧೆಡೆ ಬೈಕ್ ಮೇಲೆ ಸಂಚರಿಸಿ, ಹಸಿವಿನಿಂದ ನರಳುತ್ತಿದ್ದವರಿಗೆ ಪೊಟ್ಟಣಗಳನ್ನು ನೀಡಿದರು. ಕೊರೊನಾ ಮರಣ ಮೃದಂಗ ಮುಂದುವರೆದಿದ್ದು, ಸರ್ಕಾರವೂ ಕಟ್ಟುನಿಟ್ಟಿನ ಕ್ರಮಗಳನ್ನು ಹೆಚ್ಚಿಸುತ್ತಿದೆ.
ಅಣ್ಣಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಎಲ್ ಕೆ ಜುಲಕಟ್ಟಿ ಎಂಬುವರು, ತಮ್ಮ ಮನೆಯಿಂದಲೇ ಅಡುಗೆ ಮಾಡಿಸಿ, ಬಸ್ ವ್ಯವಸ್ಥೆ ಇಲ್ಲದೇ ಅತಂತ್ರರಾಗಿದ್ದವರಿಗೆ, ಕಾಲು ನಡಿಗೆ ಮೂಲಕ ತೆರಳುತ್ತಿರುವವರಿಗೆ ಆಹಾರ ಹಾಗೂ ಕುಡಿಯಲು ನೀರನ್ನು ವಿತರಣೆ ಮಾಡಿದರು.