ಹುಬ್ಬಳ್ಳಿ :ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗಿದೆ ಎಂದು ಮೊಬೈಲ್‌ಗೆ ಸಂದೇಶ ಕಳುಹಿಸಿ ಅಪರಿಚಿತರು ಮಹಿಳೆಗೆ 7.65 ಲಕ್ಷ ರೂ.ವಂಚನೆ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯ ನಿವಾಸಿ ಎ ಎಸ್ ಬಂಡಿ ಎಂಬುವರು ಮೋಸ ಹೋದವರು. ಇವರು ತಮ್ಮ ಬ್ಯಾಂಕಿನ ಖಾತೆ ಬಂದ್ ಆಗುತ್ತದೆ ಎಂಬ ಭಯದಿಂದ ಮೆಸೇಜ್ ಬಂದ ನಂಬರ್ಗೆ ಸಂಪರ್ಕಿಸಿದ್ದಾರೆ. ಆಗ ಅಪರಿಚಿತರು ತಾವು ಬ್ಯಾಂಕ್ ನೌಕರರೆಂದು ನಂಬಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಬಳಿಕ ಬ್ಯಾಂಕಿನ ವಿವಿಧ ಮಾಹಿತಿ ಪಡೆದು ಹಂತ ಹಂತವಾಗಿ ಒಟ್ಟು 7.65 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಈ ಸಂಬಂಧ ಹುಬ್ಬಳ್ಳಿ -ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಲಿಫ್ಟ್ ಕೇಳಿ ಮೋಸ ಹೋದ ವ್ಯಕ್ತಿ :ಡ್ರಾಪ್ ಕೊಡುವ ನೆಪದಲ್ಲಿ ಬೆದರಿಸಿ ವ್ಯಕ್ತಿಯಿಂದ ಹಣ ಸುಲಿಗೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಗ್ರಾಮದ ನಿವಾಸಿ ರೇವಣಸಿದ್ದಯ್ಯ ಛತ್ರಮಠ ಲಿಫ್ಟ್ ಕೇಳಿ ಮೋಸ ಹೋದವರು.
ಈತ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಅಕ್ಕ ಹಾಗೂ ತಮ್ಮನನ್ನು ನೋಡಲು ನಿನ್ನೆ(ಶುಕ್ರವಾರ) 2.30ಕ್ಕೆ ಹೊಸೂರು ಕ್ರಾಸ್‌ನಲ್ಲಿ ನಿಂತಿದ್ದರು. ಈ ವೇಳೆ ಅಪರಿಚಿತರು ಸ್ಕೂಟಿಯಲ್ಲಿ ಬಂದು ಕಿಮ್ಸ್ ಆಸ್ಪತ್ರೆಗೆ ಬಿಡುವುದಾಗಿ ಹತ್ತಿಸಿಕೊಂಡು ಸುಳ್ಳದ ರಸ್ತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.
ನಂತರ ಅಲ್ಲಿ ಬೆದರಿಸಿ ಜೇಬಿನಲ್ಲಿದ್ದ 1,500 ರೂ. ಹಣ ತೆಗೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಹಿಟ್ ಆ್ಯಂಡ್ ರನ್ ಕೇಸ್ : ಇಬ್ಬರು ಬೈಕ್ ಸವಾರರು ಸಾವು