ETV Bharat Karnataka

ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಲ್ಲಿ ಡ್ರೈವರ್ ಮೇಲೆ ಆರ್​ಎಸ್​​ಐ ಹಲ್ಲೆ ಪ್ರಕರಣ: ಎಸ್ಐ ಸೇರಿ ನಾಲ್ವರು ಅಮಾನತು - Four staff suspendend including PSI at hubballi

ಸಶಸ್ತ್ರ ಮೀಸಲು ಪಡೆಯ ನಾಲ್ವರು ಸಿಬ್ಬಂದಿಯಿಂದ ಚಾಲಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಆರ್​ಎಸ್​ಐ ಪಿ. ರವಿಕುಮಾರ್​ ಸೇರಿದಂತೆ ನಾಲ್ವರನ್ನು ಅಮಾನತು ಮಾಡಿ ನಗರ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಆದೇಶ ಹೊರಡಿಸಿದ್ದಾರೆ.

hubballi
ಹುಬ್ಬಳ್ಳಿ
author img

By

Published : Oct 7, 2021, 7:19 PM IST

ಹುಬ್ಬಳ್ಳಿ: ನಗರದಲ್ಲಿ ಡ್ರೈವರ್ ಮೇಲೆ ಪೊಲೀಸ್ ಅಧಿಕಾರಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್.ಎಸ್.ಐ ಸೇರಿ ನಾಲ್ವರು ಪೊಲೀಸರನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದಾರೆ.

in article image
ಡ್ರೈವರ್ ಮೇಲೆ ಆರ್​ಎಸ್​​ಐ ಹಲ್ಲೆ

ವಾಹನ ಸ್ವಚ್ಛಗೊಳಿಸುವ ಸಮಯದಲ್ಲಿ‌ ಶ್ರೀಶೈಲ್ ಹಾಗೂ ಮುದ್ದಪ್ಪ ಎಂಬುವರ ಮೇಲೆ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿಯ ಮಂಜುನಾಥ ನಗರದಲ್ಲಿ ಹಲ್ಲೆ ನಡೆದಿತ್ತು ಎನ್ನಲಾಗ್ತಿದೆ.

ಪೊಲೀಸ್ ಆಯುಕ್ತ ಲಾಬೂರಾಮ್

ಸಶಸ್ತ್ರ ಮೀಸಲು ಪಡೆಯ ನಾಲ್ವರು ಸಿಬ್ಬಂದಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಆರ್​ಎಸ್​ಐ ಪಿ.ರವಿಕುಮಾರ್​ ಸೇರಿದಂತೆ ನಾಲ್ವರನ್ನು ಅಮಾನತು ಮಾಡಿ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಆದೇಶ ಹೊರಡಿಸಿದ್ದಾರೆ.

ಓದಿ:ಕ್ಷುಲ್ಲಕ ವಿಚಾರಕ್ಕೆ ಯುವಕರ ಮೇಲೆ ಆರ್‌ಎಸ್‌ಐ ಹಲ್ಲೆ!: ಹುಬ್ಬಳ್ಳಿ ಜನರ ಆಕ್ರೋಶ

ABOUT THE AUTHOR

...view details