ಕರ್ನಾಟಕ

karnataka

ETV Bharat / state

Watch video: ನಿರಂತರ ಮಳೆಗೆ ಧಾರವಾಡ ತತ್ತರ: ಹಳ್ಳದ ನೀರಿನಲ್ಲಿ ಕೊಚ್ಚಿ ಹೋದ ಜಾನುವಾರು - ಧಾರವಾಡ ಮಳೆ ಸುದ್ದಿ

ಅಳ್ನಾವರ ತಾಲೂಕಿನ ಗ್ರಾಮ‌ ಕಂಬಾರಗಣವಿ ಗ್ರಾಮದ ಬಳಿಯ ಸೇತುವೆ ಮೇಲೆ ಹಳ್ಳದ ನೀರು ಹರಿಯುತ್ತಿದ್ದು, ನಾಲ್ಕು ಜಾನುವಾರುಗಳು ಕೊಚ್ಚಿಹೋಗಿವೆ.

alnavar-taluk
ನೀರಿನಲ್ಲಿ ಕೊಚ್ಚಿ ಹೋದ ಜಾನುವಾರುಗಳು

By

Published : Jul 23, 2021, 9:10 AM IST

Updated : Jul 23, 2021, 1:58 PM IST

ಧಾರವಾಡ: ಜಿಲ್ಲೆಯಲ್ಲಿ ವರುಣನ ಅರ್ಭಟ ಜೋರಾಗಿದ್ದು, ಹಳ್ಳಗಳು ಉಕ್ಕಿ ಹರಿಯುತ್ತಿದೆ. ಇನ್ನು ನೀರಿನ ರಭಸಕ್ಕೆ ಜಾನುವಾರುಗಳು ಕೊಚ್ಚಿ ಹೋದ ಘಟನೆ ಅಳ್ನಾವರ ತಾಲೂಕಿನ ಕಂಬಾರಗಣವಿ ಹೊರವಲಯದಲ್ಲಿ ನಡೆದಿದೆ.

ಗುರುವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆ ಮೇಲೆ ‌ನೀರು ಹರಿಯುತ್ತಿದೆ. ರಾತ್ರಿಯಿಡಿ ವರ್ಷಧಾರೆ ಮುಂದುವರಿದ ಪರಿಣಾಮ ಕಂಬಾರಗಣವಿ ಗ್ರಾಮಕ್ಕೆ ಸಂಪರ್ಕ ರಸ್ತೆ ಕೂಡ ಬಂದ್ ಆಗಿದೆ.

ನೀರಿನಲ್ಲಿ ಕೊಚ್ಚಿ ಹೋದ ಜಾನುವಾರುಗಳು

ಅಳ್ನಾವರ ತಾಲೂಕಿನ ಗ್ರಾಮ‌ ಕಂಬಾರಗಣವಿ ಗ್ರಾಮದ ಬಳಿಯ ಸೇತುವೆ ಮೇಲೆ ಹಳ್ಳದ ನೀರು ಹರಿಯುತ್ತಿದ್ದು, ನಾಲ್ಕು ಜಾನುವಾರುಗಳು ಕೊಚ್ಚಿಹೋಗಿವೆ. ಮೇಯಲು ಹೋಗಿ ಮರಳಿ ಬರುವಾಗ ಸೇತುವೆ ನೀರಿಗೆ ಸಿಲುಕಿದೆ. ಜಾನುವಾರುಗಳು ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ.

Last Updated : Jul 23, 2021, 1:58 PM IST

ABOUT THE AUTHOR

...view details