ಹುಬ್ಬಳ್ಳಿ: ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ತೆರಳಿದ್ದ ನಾಲ್ವರು ಸ್ನೇಹಿತರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ತಾಲೂಕಿನ ದೇವರಗುಡಿಹಾಳದ ಕೆರೆಯಲ್ಲಿ ನಡೆದಿದೆ.
ಕೆರೆಯಲ್ಲಿ ಅಡಗಿದ್ದ ಯಮಧೂತ: ಸ್ನೇಹಿತನ ಹುಟ್ಟುಹಬ್ಬ ಆಚರಿಸಲು ಹೋಗಿ ನಾಲ್ವರು ನೀರು ಪಾಲು - four died in swimming in hubli
ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಯುವಕರು ನೀರುಪಾಲಾದ ದುರ್ಘಟನೆ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದ ಕೆರೆಯಲ್ಲಿ ನಡೆದಿದೆ.
ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಯುವಕರು ನೀರು ಪಾಲು
ಹುಬ್ಬಳ್ಳಿಯ ಗಣೇಶಪೇಟೆ ಮಚ್ಚಿ ಮಾರ್ಕೆಟ್ ನಿವಾಸಿಗಳಾದ ಅರ್ಮಾನ್ ಮಲ್ಲಿಕ್ ಉಣಕಲ್ (18), ಸುಭಾನ ಹೊನ್ಯಾಳ (18), ಸೋಯಾಲ್ ಸೈಯದ್ (18), ಸುಭಾನಿ (18) ಮೃತಪಟ್ಟವರು. ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಏಳು ಜನ ಸ್ನೇಹಿತರು ಸೇರಿಕೊಂಡು ತಮ್ಮ ಸ್ನೇಹಿತ ಹುಟ್ಟುಹಬ್ಬ ಆಚರಣೆಗೆ ಗುಡಿಹಾಳ ಕೆರೆಗೆ ಹೋಗಿದ್ದರು. ಇವರಲ್ಲಿ ಸೋಯಲ್ ಸೈಯದ್ ಈಜಲು ಮೊದಲು ಕೆರೆಗೆ ಇಳಿದಿದ್ದಾನೆ. ಆದರೆ ಆತನಿಗೆ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿದ್ದಾನೆ. ಇದನ್ನು ನೋಡಿದ ಮೂವರು ಸ್ನೇಹಿತರು ಕೈ ಕೈ ಹಿಡಿದು ಸೋಯಲ್ನ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಮೂವರೂ ಕೂಡ ನೀರಿನಲ್ಲು ಮುಳುಗಿ ಸಾವನ್ನಪ್ಪಿದ್ದಾರೆ.
Last Updated : Nov 11, 2019, 11:52 PM IST