ಕರ್ನಾಟಕ

karnataka

ETV Bharat / state

ಕೊರೊನಾ ಮುಕ್ತ ದೇಶವಾಗಲಿ ಎಂದು ಕಣ್ಣೀರು ಹಾಕಿ ಫಾಸ್ಟರ್ ಪ್ರಾರ್ಥನೆ - ಹುಬ್ಬಳ್ಳಿಯ ನವೀನ ಪಾರ್ಕ್ ಮಷಿನ್ ಮಿನಸ್ಟರಿ ಚರ್ಚ್‌

ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಪೊಲೀಸರು, ಸರ್ಕಾರಿ ಅಧಿಕಾರಿಗಳು, ವೈದ್ಯರು ಮಾಧ್ಯಮದವರು, ಪೌರ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಪ್ರಾರ್ಥನೆ ಮಾಡಿದ್ದಾರೆ.

foster-praying-that-corona
ಕೊರೊನಾ ಮುಕ್ತ ದೇಶವಾಗಲಿ ಎಂದು ಕಣ್ಣೀರು ಹಾಕಿ ಫಾಸ್ಟರ್ ಪ್ರಾರ್ಥನೆ

By

Published : Apr 30, 2021, 10:24 PM IST

ಹುಬ್ಬಳ್ಳಿ:ದೇಶ ಸೇರಿದಂತೆ ರಾಜ್ಯದಲ್ಲಿ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಆದಷ್ಟು ಬೇಗ ಎಲ್ಲರೂ ಗುಣಮುಖರಾಗಲೆಂದು ಹುಬ್ಬಳ್ಳಿಯ ನವೀನ ಪಾರ್ಕ್ ಮಷಿನ್ ಮಿನಸ್ಟರಿ ಚರ್ಚ್‌ನ ಫಾಸ್ಟರ್ ಕೆ. ಓಬುಲ್ ರಾವ್ ಕಣ್ಣೀರು ಹಾಕಿದ್ದಾರೆ.

ಕೊರೊನಾ ಮುಕ್ತ ದೇಶವಾಗಲಿ ಎಂದು ಕಣ್ಣೀರು ಹಾಕಿ ಫಾಸ್ಟರ್ ಪ್ರಾರ್ಥನೆ

ಓದಿ: ಬೆಚ್ಚಿಬಿದ್ದ ಕರ್ನಾಟಕ - ಒಂದೇ ದಿನ 48 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆ: 217 ಜನ ಬಲಿ

ಕೊರೊನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ಪೊಲೀಸರು, ಸರ್ಕಾರಿ ಅಧಿಕಾರಿಗಳು, ವೈದ್ಯರು ಮಾಧ್ಯಮದವರು, ಪೌರ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಪ್ರಾರ್ಥನೆ ಮಾಡಿದ್ದಾರೆ.

ಅದೇ ರೀತಿ ರಾಜ್ಯ ಸರ್ಕಾರದ ನಿಯಮದಂತೆ ಚರ್ಚ್‌ದಲ್ಲಿ ಪ್ರಾರ್ಥನೆ ಮಾಡಲು ಯಾರಿಗೂ ಅವಕಾಶ ಇರದ ಕಾರಣ ಫಾಸ್ಟರ್ ಕೆ. ಓಬುಲ್ ರಾವ್ ಅವರು ಆನ್ಲೈನ್ ಮೂಲಕ ಎಲ್ಲರಿಗೂ ಪ್ರಾರ್ಥನೆ ಮಾಡುವ ಮುಖಾಂತರ, ಇಡೀ ಜಗತ್ತಿನ ತುಂಬ ಹರಡಿದ ಈ ಕಿಲ್ಲರ್ ಕೊರೊನಾ ನಾಶವಾಗಿ ಎಲ್ಲರೂ ಸುಖಕರವಾಗಿ ಜೀವನ ನಡೆಸಲಿ ಎಂದು ದೇವರಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details