ಕರ್ನಾಟಕ

karnataka

ETV Bharat / state

ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಗೆ ಜೆಡಿಎಸ್ ಬೆಂಬಲ.. ಎನ್ ಹೆಚ್ ಕೋನರೆಡ್ಡಿ - ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎರಡು ತಿಂಗಳ‌ ನಂತರ ತಿಳಿಸುವೆ ಕೋನರೆಡ್ಡಿ

ಹಾವೇರಿ, ಗದಗ, ಧಾರವಾಡ ಜಿಲ್ಲೆಯ ಮುಖಂಡರೊಂದಿಗೆ ಸಭೆ ನಡೆಸಿ ಸಲೀಂ ಅಹ್ಮದ್ ಅವರಿಗೆ ಬೆಂಬಲ ಸೂಚಿಸಲು ನಮ್ಮ ವರಿಷ್ಠರು ತಿಳಿಸಿದ್ದಾರೆ ಎಂದು ಮಾಜಿ ಶಾಸಕ ಎನ್ ಹೆಚ್ ಕೋನರೆಡ್ಡಿ ಹೇಳಿದ್ದಾರೆ.

ಜೆಡಿಎಸ್ ಮುಖಂಡ ಎನ್ ಹೆಚ್ ಕೋನರೆಡ್ಡಿ
ಜೆಡಿಎಸ್ ಮುಖಂಡ ಎನ್ ಹೆಚ್ ಕೋನರೆಡ್ಡಿ

By

Published : Dec 8, 2021, 5:01 PM IST

ಹುಬ್ಬಳ್ಳಿ :ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗೆ ಜೆಡಿಎಸ್ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದೇವೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಎನ್ ಹೆಚ್ ಕೋನರೆಡ್ಡಿ ಹೇಳಿದರು.

ಜೆಡಿಎಸ್ ಮುಖಂಡ ಎನ್ ಹೆಚ್ ಕೋನರೆಡ್ಡಿ ಸುದ್ದಿಗೋಷ್ಠಿ

ನಗರದಲ್ಲಿಂದು ಮಾಧ್ಯಮಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಈಗಾಗಲೇ ನಮ್ಮ ವರಿಷ್ಠರು ತಿಳಿಸಿದಂತೆ ನಾವು ಹಾವೇರಿ, ಗದಗ, ಧಾರವಾಡ ಜಿಲ್ಲೆಯ ಮುಖಂಡರೊಂದಿಗೆ ಸಭೆ ನಡೆಸಿ ಸಲೀಂ ಅಹ್ಮದ್ ಅವರಿಗೆ ಬೆಂಬಲ ಸೂಚಿಸಲು ತೀರ್ಮಾನಿಸಲಾಯಿತು. ಹಾಗಾಗಿ ಜಿಲ್ಲೆಯಲ್ಲಿನ ಜೆಡಿಎಸ್ ನ 1,000 ಕ್ಕೂ ಅಧಿಕ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡಬೇಕೆಂದು ಸೂಚಿಸಲಾಗಿದೆ ಎಂದರು.

ಬೆಳಗಾವಿಯಲ್ಲಿ ಅಧಿವೇಶನ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ ಅಧಿವೇಶನದಲ್ಲಿ ನಂಜುಂಡಪ್ಪ ವರದಿ, ಪರಮಶಿವಪ್ಪ ವರದಿ ಜಾರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸುವುದಿಲ್ಲ. ಹಾಗಾಗಿ ಸುವರ್ಣಸೌಧದಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕೆಂದು ಒತ್ತಾಯಿಸಿದರು.

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎರಡು ತಿಂಗಳ‌ ನಂತರ ತಿಳಿಸುವೆ :

ಕಾಂಗ್ರೆಸ್ ಸೇರ್ಪಡೆ ಬಗ್ಗೆ ಕ್ಷೇತ್ರದ ಜನತೆಯ ಜೊತೆ ಮಾತನಾಡಿ ಮುಂದಿನ 2 ತಿಂಗಳ ನಂತರ ನಿರ್ಧರಿಸುತ್ತೇನೆ. ಪಕ್ಷದ ವರಿಷ್ಠ ಹೆಚ್​ ಡಿ ದೇವೇಗೌಡ್ರು, ಮಾಜಿ ಸಿಎಂಗಳಾದ ಹೆಚ್.ಡಿ.ಕೆ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಮ್ಮ ನಾಯಕರು. ನಾನು ಪಕ್ಷೇತರವಾಗಿ ನಿಂತರು ನವಲಗುಂದದಲ್ಲಿ ಗೆಲ್ಲುತ್ತೇನೆ. ಆದ್ರೆ ಸದ್ಯ ನನಗೆ ರೈತರ ಪರ ಹೋರಾಟ ಅಷ್ಟೇ ಗುರಿ. ಸಿಎಂ ಬೊಮ್ಮಾಯಿ ಈ ಅಧಿವೇಶನದಲ್ಲಿ ಮಹಾದಾಯಿ ಯೋಜನೆ ಕಾಮಗಾರಿ ಘೋಷಣೆ ಮಾಡಲಿ. ರೈತರು ಬೆಳೆ ವಿಮೆ ಬಗ್ಗೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಆ ಬಗ್ಗೆ ಹೋರಾಟ ಮಾಡುತ್ತೇನೆ ಎಂದರು ಹೇಳಿದರು.

ಶಿಘ್ರದಲ್ಲೇ ಹುಬ್ಬಳ್ಳಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿಯವರೆಗ ಪಾದಯಾತ್ರೆ ಮಾಡಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತೇನೆ. ವಿಮೆ ಸ್ಕ್ಯಾಮ್ ಬಗ್ಗೆ ದೂರು ನೀಡಿದರೂ. ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಕೋನರೆಡ್ಡಿ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

ABOUT THE AUTHOR

...view details