ಕರ್ನಾಟಕ

karnataka

ETV Bharat / state

ರಮೇಶ್ ಜಾರಕಿಹೊಳಿ​ ಸಿಡಿ ಬಿಜೆಪಿ ಆಂತರಿಕ ವಿಚಾರ, ನಾನು ಮಾತನಾಡಲ್ಲ: ಕೋನರಡ್ಡಿ - ಮಾಜಿ ಶಾಸಕ ಕೋನರಡ್ಡಿ

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಘೋಷಿಸುವಂತೆ ಒತ್ತಾಯಿಸಿ ಹೋರಾಟ ಮಾಡಲಾಗುವುದು ಎಂದು ಮಾಜಿ ಶಾಸಕ ಎನ್.ಹೆಚ್ ಕೋನರಡ್ಡಿ ಹೇಳಿದ್ದಾರೆ.

Former  mla  Konoraddi
ಮಾಜಿ ಶಾಸಕ ಕೋನರಡ್ಡಿ

By

Published : Mar 3, 2021, 4:50 PM IST

ಹುಬ್ಬಳ್ಳಿ: ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿಡಿ ಬಿಜೆಪಿ ಪಕ್ಷದ ಆಂತರಿಕ ವಿಚಾರ. ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುವ ಸರ್ಕಾರ ಈ ಬಗ್ಗೆ ನೋಡಿಕೊಳ್ಳುತ್ತದೆ ಎಂದು ಮಾಜಿ ಶಾಸಕ ಕೋನರಡ್ಡಿ ಹೇಳಿದರು.

ಅನೇಕ ರಾಜಕೀಯ ಮುಖಂಡರ ರಾಸಲೀಲೆ ವಿಡಿಯೋ ಇದೆ ಎಂದು ಶಾಸಕ ಬಸವನಗೌಡ ಯತ್ನಾಳ್​ ಹೇಳಿದ್ದಾರೆ. ನಾನು ರಮೇಶ್​ ಜಾರಕಿಹೊಳಿ ರಾಸಲೀಲೆ ವಿಷಯದ ಬಗ್ಗೆ ಮಾತನಾಡುವುದಿಲ್ಲ ಎಂದು ಅವರು ಹೇಳಿದರು.

ಮಾಜಿ ಶಾಸಕ ಕೋನರಡ್ಡಿ

ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಹೋರಾಟವನ್ನು ಜೆಡಿಎಸ್ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಕೃಷ್ಣಾ ಕಣಿವೆಯ ಅಚ್ಚುಕಟ್ಟು ಪ್ರದೇಶದ ಅಧೀನದಲ್ಲಿ ಬರುವ ಮಹಾದಾಯಿ, ಕಳಸಾ ಬಂಡೂರಿ, ಮಲಪ್ರಭಾ ಹಾಗೂ ಘಟಪ್ರಭಾ ಒಳಗೊಂಡಂತೆ ಆಲಮಟ್ಟಿ ಡ್ಯಾಂ ನೀರು ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳಿಗೆ ಉಪಯೋಗವಾಗುತ್ತದೆ. ಕರ್ನಾಟಕ ತನ್ನ ನೀರನ್ನು ಉಪಯೋಗಿಸಲು ಭೂಸ್ವಾಧೀನ ಮಾಡಿ ಲಕ್ಷಾಂತರ ಹೆಕ್ಟೇರ್ ಪ್ರದೇಶಗಳಿಗೆ ನೀರು ಹರಿಸಲು ರಾಜ್ಯ ಸರ್ಕಾರದಿಂದ ಇಲ್ಲಿಯವರೆಗೆ ಸಾಧ್ಯವಾಗಿಲ್ಲ.

ಈ ಹಿಂದೆ ಹೆಚ್.ಡಿ. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಕೇಂದ್ರ ಸರ್ಕಾರ ಹೊಸ ಎಐಬಿಪಿ ಯೋಜನೆ ಜಾರಿ ಮಾಡಿ ಅಂದಾಜು 18 ಸಾವಿರ ಕೋಟಿ ರೂ ಅನುದಾನ ರಾಜ್ಯಕ್ಕೆ ಕೊಟ್ಟು ನೀರಾವರಿ ಹಾಗೂ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿದ್ದಾರೆ. ಎಐಬಿಪಿ ಯೋಜನೆಯನ್ನು ಈಗಿನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸ್ಥಗಿತಗೊಳಿಸಿದ್ದಾರೆ. ಇದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಟ್ರಾಕ್ಟರ್ ರ್ಯಾಲಿ ಮೂಲಕ ಬೆಂಗಳೂರು ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ABOUT THE AUTHOR

...view details