ಧಾರವಾಡ: ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ ಕಿಡಿಕಾರಿದರು.
ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲ: ಕೋನರಡ್ಡಿ - N.H. Konareddy latest news
ಸರ್ಕಾರ ಕೇವಲ ಆರ್ಥಿಕತೆ ನೋಡಿಕೊಳ್ಳುತ್ತಿದೆ. ಜನ ಬದುಕಿದ್ರೆ ಮಾತ್ರ ಆರ್ಥಿಕತೆ ಇರುತ್ತದೆ ಎಂದು ಮಾಜಿ ಶಾಸಕ ಎನ್.ಹೆಚ್.ಕೋನರಡ್ಡಿ ಹರಿಹಾಯ್ದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರು ಹೇಳಿದ್ದನ್ನು ಸರ್ಕಾರ ಕೇಳುತ್ತಿಲ್ಲ. ಇನ್ನೊಂದಷ್ಟು ದಿನ ಲಾಕ್‌ಡೌನ್ ಮಾಡಬೇಕಿತ್ತು. ಸರ್ಕಾರ ಕೇವಲ ಆರ್ಥಿಕತೆ ನೋಡಿಕೊಳ್ಳುತ್ತಿದೆ. ಜನ ಬದುಕಿದ್ರೆ ಮಾತ್ರ ಆರ್ಥಿಕತೆ ಇರುತ್ತದೆ. ಕೊರೊನಾದಂತಹ ಸಮಯದಲ್ಲಿ ನಿಗಮ ಮಂಡಳಿ ನೇಮಕ ಬೇಕಿರಲಿಲ್ಲ. ಕೊರೊನಾ ಸಮಯದಲ್ಲಿಯೂ ಒಂದು ವರ್ಷದ ಸಾಧನೆಯ ಸಮಾರಂಭ ಮಾಡಬೇಕಾಗಿರಲಿಲ್ಲ.
ಲಕ್ಷ್ಮಣ ಸವದಿ, ಪ್ರಹ್ಲಾದ್ ಜೋಶಿ ಸಿಎಂ ಆಗ್ತಾರೆ ಎನ್ನುತ್ತಿದ್ದಾರೆ. ಯಡಿಯೂರಪ್ಪನವರಿಗೆ ವಯಸ್ಸಾಯ್ತು ಎಂದು ಚರ್ಚೆ ಮಾಡುತ್ತಿದ್ದಾರೆ. ಅವರ ಪಕ್ಷದಲ್ಲೇ ಈ ಚರ್ಚೆ ನಡೆದಿದೆ. ಇದ್ದ ಸರ್ಕಾರ ಅಸ್ಥಿರಗೊಳಿಸುವ ಪರಿಪಾಠ ಆರಂಭಿಸಿದ್ದೇ ಬಿಜೆಪಿ ಎಂದು ಆಕ್ರೋಶ ವ್ಯಕ್ತಪಡಿಸಿದರು.