ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ನಾಳೆ ನಡೆಯಲಿದೆ. ಈ ಹಿನ್ನೆಲೆ ಅವರು ಆರೋಪ ಮುಕ್ತರಾಗಿ ಬರುವಂತೆ ಧಾರವಾಡದ ಗಣೇಶನಗರ ಬಲಮುರಿ ಗಣೇಶ ದೇವಸ್ಥಾನದಲ್ಲಿ ಗಣಹೋಮ ನೆರವೇರಿಸಲಾಗಿದೆ.
ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯೆಯರು ಬಲಮುರಿ ದೇವಸ್ಥಾನದಲ್ಲಿ ಗಣಹೋಮ ನೆರವೇರಿಸಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮುತ್ತೈದೆಯರಿಗೆ ಉಡಿ ತುಂಬಿದ್ದಾರೆ. ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಜೈಲು ಸೇರಿ ಇಂದಿಗೆ ಎರಡು ತಿಂಗಳಾಗಿದೆ.