ಕರ್ನಾಟಕ

karnataka

ETV Bharat / state

ಧಾರವಾಡ ಗಡಿಯಾಚೆ ಕುಳಿತು ವಿನಯ್ ಚುನಾವಣೆ ರಣತಂತ್ರ: ಕ್ಷೇತ್ರದಲ್ಲಿ ಪತ್ನಿ, ಮಕ್ಕಳಿಂದ ಭರ್ಜರಿ ಪ್ರಚಾರ - ಕರ್ನಾಟಕ ವಿಧಾನಸಭೆ ಚುನಾವಣೆ

ಕೊಲೆ ಪ್ರಕರಣದ ಆರೋಪದ ಹಿನ್ನೆಲೆ ಕ್ಷೇತ್ರ ಪ್ರವೇಶಕ್ಕೆ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ ಪರ ಅವರ ಪತ್ನಿ ಮತ್ತು ಮಕ್ಕಳು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

Former Minister Vinay's wife Shivleela campaign
ಮಾಜಿ ಸಚಿವ ವಿನಯ್ ಪತ್ನಿ ಶಿವಲೀಲಾ ಭರ್ಜರಿ ಪ್ರಚಾರ

By

Published : Apr 28, 2023, 9:56 AM IST

ಶಿವಲೀಲಾ ಕುಲಕರ್ಣಿ

ಧಾರವಾಡ:ಯೋಗೇಶ್ ಗೌಡಕೊಲೆ ಪ್ರಕರಣ ಆರೋಪದಡಿ ಜಿಲ್ಲೆಯಿಂದ ಹೊರಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಪರ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಕುಟುಂಬಸ್ಥರು ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ. ಕೆಪಿಸಿಸಿ ವಕ್ತಾರ ನಿಖೇತ್ ರಾಜ್ ಮೌರ್ಯ ಕೂಡ ವಿನಯ್ ಪರ ಎರಡು ದಿನ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ.

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ರೋಡ್ ಶೋದಲ್ಲಿ ಶಿವಲೀಲಾ ಕುಲಕರ್ಣಿ ಮತ್ತು ನಿಖೇತ್ ರಾಜ್ ಮೌರ್ಯ ಭಾಗಿಯಾಗಿದ್ದರು. ಕೊಲೆ ಪ್ರಕರಣ ಆರೋಪದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆ ಪ್ರವೇಶಿಸಲು ವಿನಯ್ ಕುಲಕರ್ಣಿಗೆ ಕೋರ್ಟ್ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಹೊರಗಿದ್ದುಕೊಂಡೇ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸ್ಪರ್ಧಿಸಿದ್ದಾರೆ. ಅಂತೆಯೇ ವಿನಯ್ ಪರವಾಗಿ ಅವರ ಪತ್ನಿ ಮತ್ತು ಮಕ್ಕಳು ಸಹ ಪ್ರಚಾರ ಕಾರ್ಯಕ್ಕೆ ಧುಮುಕ್ಕಿದ್ದಾರೆ.

ಧಾರವಾಡ ಗಡೆಯಾಚೆ ಕುಳಿತು ರಣತಂತ್ರ: ವಿನಯ್ ಕುಲಕರ್ಣಿ ಧಾರವಾಡ ಜಿಲ್ಲೆ ಗಡಿಯಾಚೆ ಮತದಾರರು ಮತ್ತು ಕಾರ್ಯಕರ್ತರನ್ನು ಭೇಟಿಯಾಗಿ ಹುರುದುಂಬಿಸುತ್ತಿದ್ದಾರೆ. ಗಡೆಯಾಚೆ ಕುಳಿತೇ ಕ್ಷೇತ್ರದ ಪ್ರಚಾರ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ.

ಈ ವೇಳೆ ಶಿವಲೀಲಾ ಕುಲಕರ್ಣಿ ಮಾಧ್ಯಮದವರ ಜೊತೆ ಮಾತನಾಡಿ, ಮಾಜಿ ಸಚಿವ ವಿನಯ ಕುಲಕರ್ಣಿ ಕ್ಷೇತ್ರದಲ್ಲಿ ಇಲ್ಲದೇ ಇರುವುದು ಯಾರು ಕೂಡ ಪ್ರಶ್ನೆ ಮಾಡುತ್ತಿಲ್ಲ. ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಗೆ ಈಗ ಕ್ಷೇತ್ರಕ್ಕೆ ಬರಲು ಅವಕಾಶ ಇಲ್ಲ. ಹೀಗಾಗಿ ಹಿರಿಯರು, ಯುವಕರು ಎಲ್ಲರೂ ಸೇರಿ ನನಗೆ ಪ್ರಚಾರಕ್ಕೆ ಕರೆಯುತ್ತಿದ್ದಾರೆ. ನನಗೆ ಒಳ್ಳೆಯ ಸ್ಪಂದನೆ ಇದೆ. ಕ್ಷೇತ್ರದ ಜನ ವಿನಯ್ ಕುಲಕರ್ಣಿ ಅವರನ್ನು ನೆನಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಸದ್ಯಕ್ಕೆ ವಿನಯ್ ಕುಲಕರ್ಣಿಗೆ ಕಾನೂನು ತೊಡಕಿದೆ. ನಾನು ನನ್ನ ಮಕ್ಕಳು ಕ್ಷೇತ್ರದ ಜನರಲ್ಲಿ ಮತ ಯಾಚನೆಗೆ ಹೊರಟಿದ್ದೇವೆ. ಅಭಿವೃದ್ಧಿಪರ, ವಿನಯ್ ಸಾಹೇಬರ ಪರ ಜನರ ಮುಂದೆ ಪ್ರಚಾರ ಮಾಡುತ್ತಿದ್ದೇವೆ. ಧಾರವಾಡ ಗಡಿಯಾಚೆ ವಿನಯ ಬಂದು ಜನರನ್ನು ಭೇಟಿ, ಕಾರ್ಯಕರ್ತರನ್ನು ಹುರುದುಂಬಿಸುತ್ತಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

ಬಿಜೆಪಿಯಿಂದ ಕ್ಷೇತ್ರದಲ್ಲಿ ಸಿಎಂ ಸೇರಿ ಘಟಾನುಘಟಿ ನಾಯಕರು ಬಂದು ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಮಾಜಿ ಸಚಿವ ವಿನಯ್ ವಿರುದ್ಧವಾಗಿ ಅಪಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿ ಪರವಾಗಿ ಯಾರು ಮಾತನಾಡುತ್ತಿಲ್ಲ. ವಿನಯ್ ವಿರುದ್ಧ ಹಿಂದಿನಿಂದ ಮಾಡಿದ ಅಪಪ್ರಚಾರವನ್ನೇ ಮುಂದುವರೆಸಿದ್ದಾರೆ. ಆದರೆ ನಾನು ನನ್ನ ಮಕ್ಕಳು ವಿನಯ್ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಪ್ರಚಾರ ಮಾಡುತ್ತಿದ್ದೇವೆ. ಅವರ ಭವಿಷ್ಯ ಜನರ ಕೈಯಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿನಯ್ ಇದ್ದಿದ್ದರೆ ಅವರೇ ಪ್ರಚಾರ ಮಾಡುತ್ತಿದ್ದರು. ಆದರೆ ನನಗೊಬ್ಬಳಿಗೆ ಪ್ರಚಾರ ಮಾಡೋಕೆ ಆಗಲ್ಲ. ಮಕ್ಕಳನ್ನು ಒಂದು ಕಡೆ ಪ್ರಚಾರ ಮಾಡೋಕೆ ಕಳುಹಿಸುತ್ತಿದ್ದೇನೆ. ನಾನೊಂದು ಕಡೆ ಪ್ರಚಾರ ಮಾಡುತ್ತಿದ್ದೇನೆ. ನಾನೂ ಹಾಗೂ ನನ್ನ ಮಕ್ಕಳು ಅಭಿವೃದ್ಧಿ ಪರ, ಸಾಹೇಬರ ಪರ ಮತ ಕೇಳುತ್ತಿದ್ದೇವೆ ಎಂದರು.

ವಿನಯ್​ ಕುಲಕರ್ಣಿ ಬಗ್ಗೆ ಹೊರಗಿನವರು ಯಾರು ಏನನ್ನು ಹೇಳುವುದು ಬೇಕಿಲ್ಲ. ಎರಡು ಬಾರಿ ಈ ಭಾಗದಿಂದ ಆಯ್ಕೆ ಮಾಡಿ ಕಳುಹಿಸಿದ್ದೀರಿ. ಈ ಭಾಗದ ಯುವಕರಿಗೆ ಉದ್ಯೋಗ ಸಿಗಬೇಕು ಎಂಬ ಉದ್ದೇಶದಿಂದ ಮಾರ್ಕೊಪೊಲೊದಂತಹ ಕಂಪೆನಿಗಳನ್ನು ತಂದು ಈ ಭಾಗದ ಯುವಕರಿಗೆ ಉದ್ಯೋಗ ಕೊಡಿಸುವ ಕೆಲಸವನ್ನು ವಿನಯ್ ಕುಲಕರ್ಣಿ ಅವರು ಮಾಡಿದ್ದರು ಎಂದು ಸಮರ್ಥನೆ ಮಾಡಿಕೊಂಡರು.

ಇದನ್ನೂಓದಿ:ಗೆದ್ದ ಬಳಿಕ ಗ್ರಾಮಕ್ಕೆ ಬಾರದ ಶಾಸಕಿ: ಬಿಜೆಪಿ ಮುಖಂಡರ ವಿರುದ್ಧ ಗ್ರಾಮಸ್ಥರ ಆಕ್ರೋಶ

ABOUT THE AUTHOR

...view details