ಧಾರವಾಡ:ಮಾಜಿ ಸಚಿವ ವಿನಯ್ ಕುಲಕರ್ಣಿ ಜನ್ಮದಿನ ಸಭೆಯಲ್ಲಿಡಾ.ರಾಜ್ ಕುಮಾರ್ ಗೀತೆ ಹಾಡುವ ಮೂಲಕ ಬಿಜೆಪಿ ವಿರುದ್ಧ ಅನಿಲ್ ಕುಮಾರ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
"ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು.. ಯಾರೇ ಬರಲಿ ಯಾರೇ ಹೋಗಲಿ ವಿನಯ ನಗುತಲಿರುವುದು.." ಎಂದು ಧಾರವಾಡ ಗ್ರಾಮೀಣ ಘಟಕದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನೀಲ್ ಕುಮಾರ್ ಪಾಟೀಲ್ ಹಾಡು ಹಾಡಿದ್ದಾರೆ. ಧಾರವಾಡದ ಮುರುಘಾ ಮಠದಲ್ಲಿ ನಡೆದ ಸರ್ವ ಸಮಾಜದ ಸ್ವಾಭಿಮಾನಿ ವೇದಿಕೆ ವತಿಯಿಂದ ಜನ್ಮದಿನದ ಸಭೆಯಲ್ಲಿ ಮಾತನಾಡುತ್ತಾ ಹಾಡು ಹಾಡಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.