ಕರ್ನಾಟಕ

karnataka

ETV Bharat / state

ಅಪಘಾತಕ್ಕೀಡಾದ ಉಮಾಶ್ರೀ ಕಾರು: ಇಬ್ಬರು ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ..! - ಉಮಾಶ್ರೀಯವರ ಕಾರು ಅಫಘಾತ

ಮಾಜಿ ಸಚಿವೆ ಉಮಾಶ್ರೀಯವರ ಕಾರು ಅಪಘಾತವಾಗಿದ್ದು, ಇಬ್ಬರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ಹುಬ್ಬಳ್ಳಿ ತಾಲೂಕಿನ ಬಂಡಿವಾಡ ಬಳಿ ನಡೆದಿದೆ..

Former minister Umashree's car accident
ಮಾಜಿ ಸಚಿವೆ ಉಮಾಶ್ರೀ ಕಾರು ಅಫಘಾತ

By

Published : Nov 21, 2020, 12:54 PM IST

ಹುಬ್ಬಳ್ಳಿ:ಮಾಜಿ ಸಚಿವೆ ಹಾಗೂ ಚಿತ್ರನಟಿ ಉಮಾಶ್ರೀ ಅವರ ಕಾರು ಅಫಘಾತವಾಗಿದ್ದು,ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಾಲೂಕಿನ ಬಂಡಿವಾಡ ಬಳಿ ತಡರಾತ್ರಿ ಉಮಾಶ್ರೀಯವರಿಗೆ ಸೇರಿದ ಇನ್ನೋವಾ ಹಾಗೂ ಡಾ.ಸ್ಮಿತಾ ಕಟ್ಟಿ ಎಂಬುವವರ ಬೆಲೆನೋ ಕಾರಿನ ನಡುವೆ ಅಪಘಾತ ಸಂಭವಿಸಿದೆ.

ಡಾ.ಸ್ಮಿತಾ ಕಟ್ಟಿಯವರು ವಿಜಯಪುರ ಜಿಲ್ಲಾ ಸರ್ಜನ ಡಾ.ಶರಣಪ್ಪ ಕಟ್ಟಿ ಪುತ್ರಿಯಾಗಿದ್ದು, ಘಟನೆಯಲ್ಲಿ ಡಾ. ಸ್ಮಿತಾ ಅವರ ತಾಯಿ ಶೋಭಾ (ಶಾರದಾ) ಕಟ್ಟಿ, ಚಾಲಕ ಸಂದೀಪ್​​ ವಿಭೂತಿಮಠ ಸಾವಿಗೀಡಾಗಿದ್ದಾರೆ. ಉಮಾಶ್ರೀಯವರ ಕಾರು ಚಾಲಕ ಶಿವಕುಮಾರ ಬಿಡನಾಳ ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಉಮಾಶ್ರೀಯವರ ಕಾರಿನಲ್ಲಿ ಕೆಲವು ದಾಖಲಾತಿಗಳಿದ್ದು, ಅವೆಲ್ಲವೂ ಉಮಾಶ್ರೀಯವರಿಗೆ ಸಂಬಂಧಿಸಿದ್ದಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

ABOUT THE AUTHOR

...view details