ಧಾರವಾಡ :ಡಿಕೆಶಿ ಮನೆಗೆ ಆನಂದ ಸಿಂಗ್ ಹೋಗಿ ಭೇಟಿಯಾಗಿದ್ದಾರೆ. ಭೇಟಿ ಬಗ್ಗೆ ಇಬ್ಬರೂ ಸ್ಪಷ್ಟನೆ ಕೊಟ್ಟಿದ್ದಾರೆ. ಯಾವುದೇ ರಾಜಕೀಯ ಉದ್ದೇಶ ಇಲ್ಲ ಎಂದು ಡಿಕೆಶಿ-ಆನಂದ ಸಿಂಗ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಂತೋಷ ಲಾಡ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನು ಬಿಜೆಪಿ ಮುಖಂಡರು ನಮ್ಮ ನಾಯಕರ ಸಂಪರ್ಕದಲ್ಲಿದ್ದಾರೆ. ಯಾರು ಯಾರು ನೇರ ಸಂಪರ್ಕದಲ್ಲಿದಾರೆ ಅಂತಾ ಮುಖಂಡರಿಗೆ ಗೊತ್ತಿದೆ.
ಆ ಬಗ್ಗೆ ಮುಖಂಡರೇ ಮಾತನಾಡಬೇಕು. ಸಾರ್ವಜನಿಕ ಜೀವನದಲ್ಲಿ ಯಾವಾಗ, ಯಾರು, ಯಾವ ತೀರ್ಮಾನ ಕೈಗೊಳ್ಳುತ್ತಾರೆ ಅವರವರಿಗೆ ಬಿಟ್ಟಿದ್ದು. ಅವರವರ ವಿವೇಚನೆಗೆ ಬಿಟ್ಟಿದ್ದು ಎಂದರು.
ಕೇಂದ್ರ ಬಜೆಟ್ ಕುರಿತಂತೆ ಮಾಜಿ ಸಚಿವ ಸಂತೋಷ ಲಾಡ್ ಮಾತನಾಡಿರುವುದು.. ಅವರ ಅಭಿಪ್ರಾಯ, ಅವರ ತೀರ್ಮಾನಗಳಿಗೆ ಅಂಥವರೇ ಉತ್ತರ ಕೊಡಬೇಕು. ಸದ್ಯ ಡಿಕೆಶಿ-ಆನಂದ ಸಿಂಗ್ ಸ್ಪಷ್ಟನೆ ಕೊಟ್ಟಿದ್ದಾರೆ. ಅದು ಬಿಟ್ಟರೇ ಬೇರೆ ಉದ್ದೇಶ ಏನಿದೆ ಎಂಬುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಕೇಂದ್ರ ಬಜೆಟ್ ಮಂಡನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕರ್ನಾಟಕ ಭಾಗಕ್ಕೆ ಹೆಚ್ಚಿನ ಅನುಕೂಲ ಆಗಿಲ್ಲ. ಕರ್ನಾಟಕಕ್ಕೆ ಕೇಂದ್ರ ಬಜೆಟ್‌ನಿಂದ ಬಹಳ ದೊಡ್ಡ ಅನುಕೂಲವಾಗಿಲ್ಲ. ಕ್ರಾಂತಿಕಾರಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರವೇ ಹೆಚ್ಚು ಒತ್ತು ಕೊಟ್ಟಿದೆ ಎಂದರು.
ನೀರಾವರಿ ಯೋಜನೆಗಳಿಗೆ ಕೇಂದ್ರ, ರಾಜ್ಯದಲ್ಲಿ ನಮ್ಮ ಸರ್ಕಾರವೇ ಹೆಚ್ಚು ಕೊಟ್ಟಿದೆ. ಸಿದ್ದರಾಮಯ್ಯ ಕಾಲದಲ್ಲಿ 60 ಸಾವಿರ ಕೋಟಿ ನೀರಾವರಿಗೆ ಖರ್ಚು ಮಾಡಿದ್ದೇವೆ. ನಾವು ನೀರಾವರಿಗೆ ಹೇಳಿದ ಮಾತು ಎಲ್ಲ ಮಾಡಿದ್ದೇವೆ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಆದರೂ ಎರಡೂ ಕಡೆ ಸರ್ಕಾರ ನೀರಾವರಿಗೆ ಒತ್ತು ಕೊಟ್ಟಿಲ್ಲ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾರು ರೈತರ ಪರ ಅಂತಾ ಜನ ತಿಳಿಯಬೇಕು. ನಮ್ಮ ರಾಜ್ಯದ ಸಂಸದರು ಇಷ್ಟಿದ್ದರೂ ಏನೂ ಆಗಿಲ್ಲ ಎಂದು ಹೇಳಿದರು.
ಕೇಂದ್ರ, ರಾಜ್ಯದಲ್ಲಿ ಒಂದೇ ಸರ್ಕಾರವಿದ್ದರೇ ಹೆಚ್ಚು ಅನುದಾನ ಅಂತಾ ಹೇಳಿದ್ದರು. ಆದರೆ, ನಮ್ಮ ರಾಜ್ಯಕ್ಕೆ ಬರಬೇಕಾದ ತೆರಿಗೆ ಹಣವನ್ನೇ ಕೇಂದ್ರ ಕೊಟ್ಟಿಲ್ಲ. ರಾಷ್ಟ್ರೀಯ ಮಾಧ್ಯಮಗಳು ಅವರ ಪರವೇ ಇವೆ. ಇಂದು ಗ್ರಹಿಕೆಯೇ ಕಾರ್ಯರೂಪಕ್ಕಿಂತ ಮುಖ್ಯ ಆಗಿದೆ. ನರೇಂದ್ರ ಮೋದಿ ಗ್ರಹಿಕೆ ಬೆಳೆಸುವುದರಲ್ಲಿ ನಿಸ್ಸೀಮರಿದ್ದಾರೆ. ಹಾಗಾಗಿ, ಜನರಲ್ಲಿ ಅದೇ ಗ್ರಹಿಕೆ ಮೂಡಿಸುತ್ತಿದ್ದಾರೆ. ಹೀಗಾಗಿ, ಎಲ್ಲ ರೀತಿಯಿಂದ ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿದರು.
ಓದಿ:ಮತ್ತೊಂದು ಬಿಎಂಟಿಸಿ ಬಸ್ನಲ್ಲಿ ಬೆಂಕಿ: 30 ಪ್ರಯಾಣಿಕರು ಅಪಾಯದಿಂದ ಪಾರು