ಹುಬ್ಬಳ್ಳಿ:ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಒಬ್ಬರು 75ನೇ ವಯಸ್ಸಿನಲ್ಲಿ ಎರಡನೇ ವಿವಾಹ ಮಾಡಿಕೊಂಡು ಸುದ್ದಿಯಾಗಿದ್ದಾರೆ.
ಮಾಜಿ ಮೇಯರ್ ಡಿ.ಕೆ.ಚವ್ಹಾಣ್ ಅವರು 75ನೇ ವಯಸ್ಸಿನಲ್ಲಿ ಎರಡನೇ ವಿವಾಹವಾಗಿದ್ದಾರೆ. ಮೊದಲ ಪತ್ನಿ ಶಾರದಾ ಕಳೆದ ಮೂರು ತಿಂಗಳ ಹಿಂದೆ ಮರಣ ಹೊಂದಿದ್ದರು. ಪತ್ನಿ ತೀರಿಕೊಂಡು ಮೂರು ತಿಂಗಳ ನಂತರ ಪತ್ನಿಯ ಸಹೋದರಿ ಅನಸೂಯಾರನ್ನೇ ಡಿ.ಕೆ.ಚವ್ಹಾಣ್ ಕೈ ಹಿಡಿಯುವ ಮೂಲಕ ಅವರಿಗೆ ಬಾಳು ನೀಡಿದ್ದಾರೆ.