ಕರ್ನಾಟಕ

karnataka

ETV Bharat / state

'ಸಿದ್ದರಾಮಯ್ಯ ಹೆಚ್​ಡಿಕೆಗೆ ಯಾವಾಗ್ಲೂ ಬೈತಾರೆ, ಆದ್ರೆ ಖರ್ಗೆ ಕುಮಾರಸ್ವಾಮಿ ಮನೆ ಮುಂದೆ ಭಿಕ್ಷೆ ಬೇಡ್ತಿಲ್ವಾ?' - Former CM Jagadish Shettar statement about Congress news

ಸಿದ್ದರಾಮಯ್ಯ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಮಾರಸ್ವಾಮಿಗೆ ಬೈತಾರೆ. ಆದರೆ ಸದ್ಯ ಮಲ್ಲಿಕಾರ್ಜುನ ಖರ್ಗೆ ಕುಮಾರಸ್ವಾಮಿ ಮನೆ ಮುಂದೆ ಭಿಕ್ಷೆ ಬೇಡ್ತಿಲ್ವಾ? ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್
ಮಾಜಿ ಸಿಎಂ ಜಗದೀಶ್ ಶೆಟ್ಟರ್

By

Published : Sep 12, 2021, 7:43 PM IST

ಧಾರವಾಡ: ಬೇರೆ ಪಕ್ಷದ ಮುಖಂಡರಿಗೆ ಕ್ಷುಲ್ಲಕವಾಗಿ ಮಾತನಾಡೋದು ಕಾಂಗ್ರೆಸ್​ನವರ ಸಣ್ಣತನವನ್ನು ಪ್ರದರ್ಶನ ಮಾಡುತ್ತದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಶರಣ ಪ್ರಕಾಶ್ ಪಾಟೀಲರು ಸಚಿವರಾಗಿ ಕೆಲಸ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಅವರ ಬಾಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಕುರಿತು ಇಂಥ ಮಾತು ಬಂದಿದ್ದು ಅವರ ಚಿಲ್ಲರೆತನ ಪ್ರದರ್ಶಿಸುತ್ತೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದರು.

ಮಾಜಿ ಸಿಎಂ ಜಗದೀಶ್ ಶೆಟ್ಟರ್

ಪಾಲಿಕೆ ಅಧಿಕಾರಕ್ಕಾಗಿ ಬಿಜೆಪಿ ಪಕ್ಷ ಜೆಡಿಎಸ್ ಮನೆ ಮುಂದೆ ಕಾಯುತ್ತಿದೆ ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕುಮಾರಸ್ವಾಮಿಗೆ ಬೈತಾರೆ. ಆದರೆ ಸದ್ಯ ಮಲ್ಲಿಕಾರ್ಜುನ ಖರ್ಗೆ ಕುಮಾರಸ್ವಾಮಿ ಮನೆ ಮುಂದೆ ಭಿಕ್ಷೆ ಬೇಡ್ತಿಲ್ವಾ?, ಮೊದಲು ಅವರದ್ದು ಅವರು ನೋಡ್ಕೊಳ್ಳಲಿ ಎಂದು ಟೀಕಿಸಿದರು.

ಇದನ್ನೂ ಓದಿ:ಮೈಸೂರು ದೇವಸ್ಥಾನ ತೆರವು ವಿಚಾರ: ಸುಪ್ರೀಂಕೋರ್ಟ್ ಆದೇಶ ಕೇವಲ ಹಿಂದೂಗಳಿಗೆ ಮಾತ್ರವೇ?:ಶಾಸಕ ಯತ್ನಾಳ

For All Latest Updates

TAGGED:

ABOUT THE AUTHOR

...view details