ಹುಬ್ಬಳ್ಳಿ :ದೆಹಲಿ ಪ್ರವಾಸಕ್ಕೆ ಯಾವುದೇ ರಾಜಕೀಯ ಬಣ್ಣ ಬೇಡ. ನಾನು ಈ ಹಿಂದೆ ತಿಳಿಸಿದಂತೆ ಸಂಪುಟಕ್ಕೆ ಸೇರುವ ಪ್ರಶ್ನೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಕೈಗಾರಿಕೆಗಳಿಗೆ ಕೇಂದ್ರ ಸರ್ಕಾರದಿಂದ ನೆರವು, ಸಬ್ಸಿಡಿ ನೀಡುವ ಕುರಿತು ಮತ್ತು ನಗರದ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚಿಸಲು ನಾನು ದೆಹಲಿ ಪ್ರವಾಸ ಕೈಗೊಂಡಿದ್ದೆ. ಅಲ್ಲಿ ಸಚಿವ ಪಿಯುಷ್ ಗೋಯಲ್, ಪ್ರಲ್ಹಾದ್ ಜೋಶಿ ಅವರೊಂದಿಗೆ ಮಾತನಾಡಿದ್ದೇನೆ. ಹಾಗಾಗಿ, ದೆಹಲಿ ಪ್ರವಾಸಕ್ಕೆ ರಾಜಕೀಯ ಬಣ್ಣ ಬೇಡ ಎಂದು ತಿಳಿಸಿದರು.