ಹುಬ್ಬಳ್ಳಿ:ಶಾಂತಿನಾಥ ಮಹಿಳಾ ಮಂಡಳಿ ವತಿಯಿಂದ ಶಿರಡಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ವನಮಹೋತ್ಸವ ಕಾರ್ಯಕ್ರಮ: ಮನೆಗೊಂದು ಗಿಡ, ಊರಿಗೊಂದು ವನ - ಶಾಂತಿನಾಥ ಮಹಿಳಾ ಮಂಡಳಿ
ಹುಬ್ಬಳ್ಳಿಯ ಮಹಿಳಾ ಮಂಡಳಿಯೊಂದರ ಸದಸ್ಯರೆಲ್ಲರೂ ಸೇರಿ ಸಸಿ ನೆಡುವ ಮೂಲಕ ವನ ಮಹೋತ್ಸವ ಆಚರಣೆ ಮಾಡಿದರು.

ವನಮಹೋತ್ಸವ
ನಗರದ ಮಹಿಳಾ ಮಂಡಳಿಯ ಸದಸ್ಯರೆಲ್ಲರೂ ಸೇರಿ ಸಸಿ ನೆಡುವ ಮೂಲಕ ವನ ಮಹೋತ್ಸವ ಆಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ಶಾಂತಿನಾಥ ಮಹಿಳಾ ಮಂಡಳಿ ಅಧ್ಯಕ್ಷರಾದ ಸುಜಾತಾ ಗೌಡ ಮಾತನಾಡಿ, ಪರಿಸರವನ್ನು ನಾವೆಲ್ಲರೂ ರಕ್ಷಣೆ ಮಾಡಿದ್ರೆ ಪರಿಸರ ಕೂಡ ನಮ್ಮನ್ನು ರಕ್ಷಣೆ ಮಾಡುತ್ತೆ. ಹೀಗಾಗಿ ಮನೆಗೊಂದು ಗಿಡ ನೆಡೋಣ, ಊರಿಗೊಂದು ವನವಾಗುತ್ತೆ ಎಂದರು.
ಮನೆಗೊಂದು ಗಿಡ, ಊರಿಗೊಂದು ವನ..
ಇತ್ತೀಚಿನ ದಿನಗಳಲ್ಲಿ ಎಲ್ಲೆಂದರಲ್ಲಿ ಮರಗಳನ್ನು ಕಡಿದು ಹಾಕುತ್ತಿದ್ದಾರೆ, ಆದ್ದರಿಂದ ಎಲ್ಲರೂ ಪರಿಸರದ ಕಾಳಜಿ ವಹಿಸಬೇಕಾಗಿದೆ ಎಂದರು.