ಧಾರವಾಡ:ನಗರದಲ್ಲಿ ಇಂದು ಬೆಳಗ್ಗೆಯೇ ಜೆಸಿಬಿ ಸದ್ದು ಮಾಡಿದ್ದು, ಮಹಾನಗರ ಪಾಲಿಕೆ ಏಕಾಏಕಿ ಅತಿಕ್ರಮಣ ಫುಟ್ಪಾತ್ ತೆರವು ಕಾರ್ಯಾಚರಣೆ ನಡೆಸಿದೆ.
ಜಿಲ್ಲಾಡಳಿತದ ನಿರ್ದೇಶನದ ಮೇರೆಗೆ ಇಂದು ಬೆಳಗ್ಗೆ ಪಾಲಿಕೆ ಅಧಿಕಾರಿಗಳು ಧಾರವಾಡದ ಆಜಾದ್ ಪಾರ್ಕ್ನಿಂದ ಹಿಡಿದು ಬಾಗಲಕೋಟೆ ಪೆಟ್ರೋಲ್ ಪಂಪ್ ವರೆಗಿನ ಅತಿಕ್ರಮಣ ಫುಟ್ಪಾತ್ ತೆರವುಗೊಳಿಸಿದ್ದಾರೆ. ಹೀಗಾಗಿ ಅಂಗಡಿಕಾರರು ಪರ್ಯಾಯ ಜಾಗ ಕೊಡಬೇಕು, ಬಳಿಕ ತೆರವು ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಆದರೆ ಒಂದೆಡೆ ಅಂಗಡಿಕಾರರ ಪ್ರತಿಭಟನೆ ಹಾಗೂ ಅಧಿಕಾರಿಗಳ ಜೊತೆಗಿನ ಮಾತಿನ ಚಕಮಕಿಯ ಮಧ್ಯೆಯೇ ಮೊದಲ ದಿನದ ತೆರವು ಕಾರ್ಯಾಚರಣೆ ಮುಗಿದಿದೆ.
ಆದರೆ ಒಂದೆಡೆ ಅಂಗಡಿಕಾರರ ಪ್ರತಿಭಟನೆ ಹಾಗೂ ಅಧಿಕಾರಿಗಳ ಜೊತೆಗಿನ ಮಾತಿನ ಚಕಮಕಿಯ ಮಧ್ಯೆಯೇ ಮೊದಲ ದಿನದ ತೆರವು ಕಾರ್ಯಾಚರಣೆ ಮುಗಿದಿದೆ.