ಕರ್ನಾಟಕ

karnataka

ETV Bharat / state

ಫ್ಲೈಓವರ್ ನಿರ್ಮಾಣ ಕಾರ್ಯ ಚುರುಕು: ಮಣ್ಣಿನ ಪರೀಕ್ಷೆ ನಿರ್ಧರಿಸಲಿದೆ‌ ಇದರ ವಿನ್ಯಾಸ - decide by the soil testing

ಇದು ವಾಣಿಜ್ಯ ನಗರಿ ಹುಬ್ಬಳ್ಳಿಯ ಮಹತ್ವಪೂರ್ಣ ಯೋಜನೆಯಲ್ಲಿ ಒಂದಾಗಿರುವ ಕಾಮಗಾರಿ. ಈ ಕಾಮಗಾರಿಯಿಂದ ವಾಣಿಜ್ಯನಗರಿಯ ವಿನ್ಯಾಸವೇ ಸಂಪೂರ್ಣ ಬದಲಾಗಲಿದೆ. ವಾಣಿಜ್ಯನಗರಿ ಖ್ಯಾತಿಗೆ ಕಿರೀಟ್ ಇಟ್ಟಂತೆ ಈ ಯೋಜನೆ ತಲೆ ಎತ್ತಲಿದ್ದು, ಈ ಕಾಮಗಾರಿಗೆ ಈಗಾಗಲೇ ಚಾಲನೆ ಕೂಡ ನೀಡಲಾಗಿದೆ. ಇನ್ನೇನು ಕೆಲವೇ ವರ್ಷಗಳಲ್ಲಿ ಫ್ಲೈಓವರ್​ ತಲೆ ಎತ್ತಲಿದೆ.

ಫ್ಲೈಓವರ್ ನಿರ್ಮಾಣ ಕಾರ್ಯ ಚುರುಕು
ಫ್ಲೈಓವರ್ ನಿರ್ಮಾಣ ಕಾರ್ಯ ಚುರುಕು

By

Published : Jan 29, 2021, 9:24 AM IST

Updated : Jan 29, 2021, 10:10 AM IST

ಹುಬ್ಬಳ್ಳಿ: ವಾಣಿಜ್ಯನಗರಿಯ ಹೃದಯ ಭಾಗವಾಗಿರುವ ಚೆನ್ನಮ್ಮ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಫ್ಲೈಓವರ್ ಕಾಮಗಾರಿಗೆ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರ್ ವರ್ಚುಯಲ್ ಮೂಲಕ ಚಾಲನೆ ನೀಡಿದ್ದಾರೆ. ಈಗಾಗಲೇ ಮಣ್ಣಿನ ಪರೀಕ್ಷೆ ಕೂಡ ನಡೆಯುತ್ತಿದ್ದು, ಹುಬ್ಬಳ್ಳಿ ಲ್ಯಾಮಿಂಗ್ಟನ್ ರಸ್ತೆಯಲ್ಲಿ ನಿರ್ಮಾಣ ಕಾರ್ಯ ನಡೆಯುವ ಹಿನ್ನೆಲೆ ಮಣ್ಣಿನ ಪರೀಕ್ಷೆ ನಡೆಯುತ್ತಿದೆ. ಉತ್ತರ ಕರ್ನಾಟಕದ ಮೊದಲ ಫ್ಲೈಓವರ್ ಎಂಬ ಖ್ಯಾತಿ ಪಡೆದಿರುವ ಹುಬ್ಬಳ್ಳಿ ಫ್ಲೈಓವರ್ ‌ವಿನ್ಯಾಸವನ್ನು ಈ ಮಣ್ಣು ಪರೀಕ್ಷೆ ನಿರ್ಧರಿಸಲಿದೆ.‌

ಮಣ್ಣಿನ ಪರೀಕ್ಷೆ ನಿರ್ಧರಿಸಲಿದೆ‌ ಫ್ಲೈಓವರ್​​ ವಿನ್ಯಾಸ

ಒಟ್ಟು 322 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಫ್ಲೈಓವರ್ ನಿರ್ಮಾಣ ಕಾರ್ಯವನ್ನು ಹರಿಯಾಣ ಮೂಲದ ಜಾಂಡು ಕನಸ್ಟ್ರಕ್ಷನ್ ಕಂಪನಿಗೆ ನೀಡಲಾಗಿದೆ. ಮಣ್ಣು ಪರೀಕ್ಷೆಗೆ ಎರಡು ತಿಂಗಳಾಗಲಿದೆಯಂತೆ. ಫ್ಲೈಓವರ್ ನಿರ್ಮಾಣಕ್ಕೆ ಭೂಮಿಯ ಎಷ್ಟು ಅಡಿ ಆಳದಲ್ಲಿ ಪಿಲ್ಲರ್ ನಿರ್ಮಾಣ ಮಾಡಬೇಕು ಹಾಗೂ ಎಷ್ಟು ಅಡಿಯಲ್ಲಿ ಪಿಲ್ಲರ್ ನಿರ್ಮಾಣ ಮಾಡಿದರೇ ಸೂಕ್ತ ಎಂಬುದನ್ನು ಈ ಮಣ್ಣಿನ ಪರೀಕ್ಷೆ ನಿರ್ಧರಿಸಲಿದೆ. ಇನ್ನೂ ಸಂಗ್ರಹಿಸಿದ ಮಣ್ಣನ್ನು ದೆಹಲಿಯಲ್ಲಿರುವ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದ ನಂತರದಲ್ಲಿ ಮುಂದಿನ ಕಾಮಗಾರಿ ಬಲಗೊಳ್ಳಲು ಸಾಧ್ಯವಿದೆ. ಈಗಾಗಲೇ ಹತ್ತು ದಿನದಿಂದ ಮಣ್ಣಿನ ಪರೀಕ್ಷೆ ಕಾರ್ಯ ನಡೆಯುತ್ತಿದೆ. ಪಿಲ್ಲರ್ ಸ್ಥಾಪನೆ ಮಾಡುವ ಸುಮಾರು ಹದಿನೈದು ಮೀಟರ್ ವ್ಯಾಪ್ತಿಯಲ್ಲಿ ಮಣ್ಣಿನ ಪರೀಕ್ಷೆ ಮಾಡಿ ನಿರ್ಮಾಣ ಮಾಡಲು ನಿರ್ಧರಿಸಲಾಗುತ್ತದೆ.

ಓದಿ: ಸಾಗುವಳಿ ಜಮೀನು ಪಕ್ಕದಲ್ಲಿಯೇ ಕಲ್ಲು ಗಣಿಗಾರಿಕೆ ಆರಂಭ: ಆತಂಕದಲ್ಲಿ ಗ್ರಾಮಸ್ಥರು

ಈಗಾಗಲೇ ಮಣ್ಣಿನ ಪರೀಕ್ಷೆ ಕಾರ್ಯ ಚುರುಕಾಗಿ ನಡೆದಿದ್ದು, ಹುಬ್ಬಳ್ಳಿಯಲ್ಲಿ ಸುಮಾರು 70 ಪಿಲ್ಲರ್​ಗಳು, ಗದಗ ರಸ್ತೆ, ಬೆಂಗಳೂರು ರಸ್ತೆ, ಗೋಕುಲ ರಸ್ತೆ ಸೇರಿದಂತೆ ವಾಣಿಜ್ಯನಗರಿ ಬಹುತೇಕ ಕಡೆಗಳಲ್ಲಿ ಪಿಲ್ಲರ್ ತಲೆ ಎತ್ತಲಿವೆ. ಒಟ್ಟಿನಲ್ಲಿ ಫ್ಲೈಓವರ್ ನಿರ್ಮಾಣ ಕಾರ್ಯ‌ ಭರದಿಂದ ಸಾಗಿದ್ದು,ಇನ್ನೂ ಕೆಲವೇ ವರ್ಷಗಳಲ್ಲಿ ಫ್ಲೈಓವರ್ ತಲೆ ಎತ್ತಲಿದೆ.

Last Updated : Jan 29, 2021, 10:10 AM IST

ABOUT THE AUTHOR

...view details