ಧಾರವಾಡ:ಕೃಷಿ ವಿಶ್ವವಿದ್ಯಾಲಯ ಪ್ರತಿ ವರ್ಷ ಸೆಪ್ಟೆಂಬರ್‌ನಲ್ಲಿ ನಡೆಸುತ್ತಿದ್ದ ಕೃಷಿ ಮೇಳ, ಪ್ರವಾಹದ ಹಿನ್ನೆಲೆ ಮುಂದೂಡಲಾಗಿದೆ.
ಧಾರವಾಡ ಕೃಷಿ ಮೇಳಕ್ಕೂ ತಟ್ಟಿದ ಪ್ರವಾಹದ ಎಫೆಕ್ಟ್.. - ಪ್ರವಾಹದ ಎಫೆಕ್ಟ್
ಉತ್ತರ ಕರ್ನಾಟಕದಲ್ಲಿನ ಭೀಕರ ಪ್ರವಾಹದ ಪರಿಣಾಮವಾಗಿ ಈಗ ಧಾರವಾಡದಲ್ಲಿ ನಡೆಯಬೇಕಿದ್ದ ಕೃಷಿ ಮೇಳಕ್ಕೂ ತಟ್ಟಿದೆ.
ಕೃಷಿ ಮೇಳ ಇದೇ ಸೆಪ್ಟಂಬರ್ 21ರಿಂದ 24ರವರೆಗೆ ಆಯೋಜನೆಗೊಂಡಿತ್ತು. ಇದಕ್ಕಾಗಿ ತಯಾರಿಗಳು ಕೂಡ ಭರದಿಂದ ನಡೆದಿದ್ದವು. ಆದರೆ, ಈ ಮೇಳದಲ್ಲಿ ಹೆಚ್ಚು ಪಾಲ್ಗೊಳ್ಳುವಿಕೆ ಉತ್ತರ ಕರ್ನಾಟಕದ ರೈತರದ್ದಾಗಿರುತ್ತೆ. ಹೀಗಾಗಿ ಈ ಭಾಗದಲ್ಲಿಯೇ ಪ್ರವಾಹ ಬಂದು ರೈತರು ಸಂಕಷ್ಟದಲ್ಲಿರುವ ಕಾರಣಕ್ಕೆ ಕೃಷಿ ಮೇಳವನ್ನು ಸದ್ಯ ರದ್ದುಗೊಳಿಸಿ ಡಿಸೆಂಬರ್ಗೆ ಮುಂದೂಡಲಾಗಿದೆ.
ಮತ್ತೊಂದೆಡೆ ಮೇಳದಲ್ಲಿ ರೈತರಿಗೆ ತೋರಿಸಬೇಕಿದ್ದ ಕೃಷಿ ವಿಶ್ವವಿದ್ಯಾಲಯದ ಬೆಳೆಗಳು ಸಹ ಮಳೆಯಿಂದ ಹಾನಿಗೊಳಗಾಗಿದ್ದರೇ, ಮತ್ತೊಂದೆಡೆ ಸೆಪ್ಟೆಂಬರ್ ಕೊನೆಯ ವಾರದಲ್ಲಿಯೂ ಅತೀ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮನ್ನು ಆಧಾರವಾಗಿಟ್ಟುಕೊಂಡು ನಡೆಯಬೇಕಿದ್ದ ಈ ಮೇಳವನ್ನು ಹಿಂಗಾರು ಹಂಗಾಮಿನ ಆಧಾರದ ಮೇಲೆ ಡಿಸೆಂಬರ್ನಲ್ಲಿ ನಡೆಸಲು ಕೃಷಿ ವಿಶ್ವವಿದ್ಯಾಲಯ ನಿರ್ಣಯಿಸಿದೆ.