ಕರ್ನಾಟಕ

karnataka

ETV Bharat / state

ನೆರೆ ಹಾವಳಿ: ಸಂತ್ರಸ್ತರಿಗೆ ಶೀಘ್ರ ಪರಿಹಾರ ಒದಗಿಸುವಂತೆ ವಿನಯ್​ ಕುಲಕರ್ಣಿ ಆಗ್ರಹ - ಧಾರವಾಡ ಸುದ್ದಿ

ಮಾಜಿ ಸಚಿವ ವಿನಯ್​ ಕುಲಕರ್ಣಿ ನೇತೃತ್ವದಲ್ಲಿ ನೆರೆಹಾವಳಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಲು ಆಗ್ರಹಿಸಿ ಧಾರವಾಡದಲ್ಲಿ ನೂರಾರು ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು.

flood-affected victms protest demand immediate relief
flood-affected victms protest demand immediate relief

By

Published : Feb 26, 2020, 6:15 PM IST

ಧಾರವಾಡ: ನೆರೆಹಾವಳಿ ಸಂತ್ರಸ್ತರಿಗೆ ಶೀಘ್ರ ಪರಿಹಾರ ನೀಡಲು ಆಗ್ರಹಿಸಿ ಮಾಜಿ ಸಚಿವ ವಿನಯ್​ ಕುಲಕರ್ಣಿ ನೇತೃತ್ವದಲ್ಲಿ ನೂರಾರು ಜನರು ಪ್ರತಿಭಟನಾ ಮೆರವಣಿಗೆ ನಡೆಸಿದ್ರು.

ಧಾರವಾಡ ಕಲಾಭವನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ವಿವಿಧ ವೃತ್ತಗಳ‌ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿ ಕೆಲಹೊತ್ತು ಪ್ರತಿಭಟಿಸಿದರು. ಜಿಲ್ಲಾಧಿಕಾರಿ ದೀಪಾ ಚೋಳನ್​ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು. ನೆರೆ ಹಾವಳಿಯಿಂದ ಹಾನಿಗೊಳಗಾದ ಮನೆಗಳನ್ನು ರಿಸರ್ವ್​​ ಮಾಡಬೇಕು. ರೈತರ ಹೊಲದ ದಾರಿಗಳು ಹಾಳಾಗಿವೆ. ನೆರೆಯಿಂದ ಹಾನಿಯಾದ ಸ್ಥಳಗಳನ್ನು ಪುನರ್ ಸರ್ವೆ ಮಾಡಿಸಿ ಸೂಕ್ತ ಫಲಾನುಭವಿಗಳಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.

ಸಂತ್ರಸ್ತರಿಗೆ ಶೀಘ್ರ ನೆರೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ವಿನಯ್​ ಕುಲಕರ್ಣಿ, ರಾಜ್ಯ ಸರ್ಕಾರ ನೆರೆ ಪರಿಹಾರ ವಿತರಣೆಯಲ್ಲಿ ಕಮೀಷನ್ ದಂಧೆ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಬಿಜೆಪಿ ಕಾರ್ಯಕರ್ತರು, ಶಾಸಕರ ಏಜೆಂಟರಿಗೆ ಮನೆ ಹಾನಿ ಪರಿಹಾರ ಕೊಡಲಾಗಿದೆ. 5 ಲಕ್ಷ ರೂಪಾಯಿ ಪರಿಹಾರ ನೀಡಲು 2 ಲಕ್ಷ ರೂ. ಕಮೀಶನ್ ಪಡೆಯಲಾಗುತ್ತಿದೆ. ಪರಿಹಾರ ವಿತರಣೆಯ ತನಿಖೆ ಮಾಡಿದ್ರೆ ಸತ್ಯ ಹೊರ ಬರುತ್ತೆ ಎಂದು ಒತ್ತಾಯಿಸಿದರು.

ಇನ್ನು ಧಾರವಾಡದ ವಿಕಲ ಚೇತನ ಮಹಿಳೆ ಮಂಜುಳಾ ಕಲ್ಲೂರ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಲಕರ್ಣಿ, ಆಕೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿ ಕಚೇರಿಗೆ ಓಡಾಡಿದ್ದಳು. ಆ ಸಂತ್ರಸ್ತೆಯ ಆತ್ಮಹತ್ಯೆ ಬಗ್ಗೆ ತನಿಖೆಯಾಗಬೇಕು. ಮೃತದೇಹದ ಶವ ಪರೀಕ್ಷೆ ಆಗಿಲ್ಲ, ಪೋಸ್ಟ್ ಮಾರ್ಟಂ ಮಾಡದೇ ಅಂತ್ಯಸಂಸ್ಕಾರ ಮಾಡಿದ್ದಾರೆ‌. ಅವರ ಮೃತದೇಹದ ಪೋಸ್ಟ್ ಮಾರ್ಟಂ ಆಗಬೇಕು ಎಂದು ಆಗ್ರಹಿಸಿದರು.

ಮಳೆ ಹಾನಿ ಪುನರ್ ಸರ್ವೆ ಮಾಡಲು 8 ದಿನ ಗಡುವು ಕೊಡುತ್ತೇವೆ. ಕೆಲವೊಂದು ಊರಲ್ಲಿ ಒಂದೇ ಮನೆಗೆ ಇಬ್ಬಿಬ್ಬರಿಗೆ ಪರಿಹಾರ ಕೊಟ್ಟಿದ್ದಾರೆ. ಅವರೆಲ್ಲ ಬಿಜೆಪಿ ಕಾರ್ಯಕರ್ತರೇ ಇದ್ದಾರೆ. ಇದರ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ. ಈ ಹೋರಾಟ ಅಂತ್ಯವಲ್ಲ, ಆರಂಭ ಎಂದು ಮಾಜಿ ಸಚಿವ ಕುಲಕರ್ಣಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.

ABOUT THE AUTHOR

...view details