ಕರ್ನಾಟಕ

karnataka

ETV Bharat / state

ಹುಬ್ಬಳ್ಳಿಯಿಂದ ಮುಂಬೈಗೆ ವಿಮಾನ‌ ಸೇವೆ ಆರಂಭ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಂತಸ - ಶಿವಮೊಗ್ಗದಿಂದ ಸ್ಟಾರ್ ಏರ್ ಲೈನ್ಸ್ ಸೇವೆ ಅರಂಭ

ಹುಬ್ಬಳ್ಳಿಯಿಂದ ಮುಂಬೈಗೆ ಇಂಡಿಗೋ ಸಂಸ್ಥೆ 186 ಆಸನಗಳಿರುವ ವಿಮಾನ ಸೇವೆ ಆರಂಭಿಸಿರುವ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

airbus-flight-service
ವಿಮಾನ‌ ಸೇವೆ ಆರಂಭ

By ETV Bharat Karnataka Team

Published : Oct 29, 2023, 7:08 AM IST

ಹುಬ್ಬಳ್ಳಿ:ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 186 ಆಸನಗಳ ವ್ಯವಸ್ಥೆ ಇರುವ ವಿಮಾನ ಸೇವೆ ಆರಂಭಿಸುವಂತೆ ಇಂಡಿಗೊ ಸಂಸ್ಥೆಗೆ ವಿನಂತಿಸಲಾಗಿತ್ತು. ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸ್ಥೆಯು ಇದೀಗ ಸೇವೆ ಆರಂಭಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ‌ಜೋಶಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನೂತನ ವಿಮಾನಸೇವೆಯು
ಮುಂಬೈ-ಹುಬ್ಬಳ್ಳಿ (6E 936): ಮುಂಬೈನಿಂದ ನಿರ್ಗಮನ: 12:00 PM, ಹುಬ್ಬಳ್ಳಿಗೆ ಆಗಮನ: 1:15 PM, ಹುಬ್ಬಳ್ಳಿ - ಮುಂಬೈ (6E 937): ಹುಬ್ಬಳ್ಳಿಯಿಂದ ನಿರ್ಗಮನ: 1:45 PM ಮುಂಬೈಗೆ ಆಗಮನ: 2:40 PM ತಲುಪಲಿದೆ ಎಂದು ತಿಳಿಸಿದ್ದಾರೆ.

ಛೋಟಾ ಮುಂಬೈ ಎಂದೇ ಕರೆಯಲ್ಪಡುವ ಹುಬ್ಬಳ್ಳಿಯಿಂದ ಮುಂಬೈಗೆ ತೆರಳುವ ಪ್ರಯಾಣಿಕರ ಪ್ರಯಾಣ ಇನ್ನು ಮುಂದೆ ಸುಖಕರವಾಗಲಿದೆ. ಇಂಡಿಗೋ ಸಂಸ್ಥೆಯ ಸೇವೆಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದಿಂದ ಸ್ಟಾರ್ ಏರ್‌ಲೈನ್ಸ್ ವಿಮಾನ ಸೇವೆ ಶೀಘ್ರ:ನಗರದ ನೂತನ ವಿಮಾನ ನಿಲ್ದಾಣದ ಬಾಂಬ್ ಥ್ರೆಟ್ ಕಂಟೆಸ್ಸರಿ ಪ್ಲಾನ್ ಅನ್ನು ಆದಷ್ಟು ಬೇಗ ನವೀಕರಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗ ಬೆಳಿಗ್ಗೆ ಒಂದು ವಿಮಾನ ಬೆಂಗಳೂರು-ಶಿವಮೊಗ್ಗ ನಡುವೆ ಹಾರಾಟ ನಡೆಸುತ್ತಿದೆ. ಮುಂದಿನ ವಾರದಲ್ಲಿ ಸಂಜೆ ಇನ್ನೊಂದು ವಿಮಾನ ಹಾರಾಟ ನಡೆಸಲಿದೆ. ಮುಂದಿನ ತಿಂಗಳು 22ರಿಂದ ಸ್ಟಾರ್ ಏರ್‌ಲೈನ್ಸ್‌ನವರು ತಿರುಪತಿ, ಗೋವಾ, ಹೈದರಾ​ಬಾದ್ ಸೇರಿದಂತೆ ಇತರೆ ಪ್ರದೇಶಗಳಿಗೆ ಹಾರಾಟ ನಡೆಸಲಿದ್ದಾರೆ. ಏರೋಡ್ರೋಮ್ ಸೆಕ್ಯೂರಿಟಿ ಪ್ರೋಗ್ರಾಂ ಬಾಂಬ್ ಥ್ರೆಟ್ ಕಂಟೆಸ್ಸರಿ ಪ್ಲಾನ್‌ನಡಿ ಮುಂದಿನ ತಿಂಗಳು (ನವೆಂಬರ್) 23ರ ತನಕ ಲೈಸನ್ಸ್‌ಗೆ ಅನುಮತಿ ಸಿಕ್ಕಿದೆ ಎಂದು ತಿಳಿಸಿದರು.

ಈ ಲೈಸನ್ಸ್​ ರಿನೀವಲ್ ಮಾಡಿಸಬೇಕಿದೆ. ಮುಂದಿನ ತಿಂಗಳು ಸ್ಟಾರ್ ಏರ್​ಲೈನ್ಸ್​ ಹಾರಾಟ ಪ್ರಾರಂಭಿಸಿದರೆ, ಅವರಿಗೆ ಒಂದು ವಾರ ಕಾಲ ಮಾತ್ರ ಹಾರಾಟಕ್ಕೆ ಅವಕಾಶ ಸಿಗುತ್ತದೆ. ಹೀಗಾಗಿ ಆದಷ್ಟು ಬೇಗ ಲೈಸನ್ಸ್ ರಿನೀವಲ್ ಮಾಡಬೇಕಿದೆ ಎಂದು ಸಂಸದರು ಹೇಳಿದ್ದಾರೆ.

ಇದನ್ನೂಓದಿ:ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೇಳಿಲ್ಲ: ಶಾಸಕ ವಿನಯ್​ ಕುಲಕರ್ಣಿ

ABOUT THE AUTHOR

...view details