ಕರ್ನಾಟಕ

karnataka

ETV Bharat / state

ವಿಮಾನಯಾನದತ್ತ ಪ್ರಯಾಣಿಕರ ಒಲವು: ಹುಬ್ಬಳ್ಳಿಯಲ್ಲಿ ಮತ್ತೆ ಲೋಹದ ಹಕ್ಕಿಗಳ‌ ಹಾರಾಟ - ಹುಬ್ಬಳ್ಳಿಯಲ್ಲಿ ವಿಮಾನಗಳು ಕಾರ್ಯಾರಂಭ

ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮೆ.25 ರಿಂದ ವಿಮಾನಯಾನ ಪ್ರಾರಂಭವಾದ ಬೆನ್ನಲ್ಲೇ ಇದೀಗ ಹುಬ್ಬಳ್ಳಿ ವಿಮಾನನಿಲ್ದಾಣದಲ್ಲಿ ವಿಮಾನಯಾನ ಸೇವೆ ಮೊದಲಿನ ಸ್ಥಿತಿಗೆ ಮರಳಿದೆ. ವಿಮಾನ ಪ್ರಯಾಣದತ್ತ ಜನರು ಹೆಚ್ಚಿನ ಒಲವು ತೋರುತ್ತಿದ್ದಾರೆ.

flight service started from hubli airport again
ವಿಮಾನಯಾನದತ್ತ ಪ್ರಯಾಣಿಕರ ಒಲವು

By

Published : Sep 26, 2020, 5:58 PM IST

ಹುಬ್ಬಳ್ಳಿ:ಲಾಕ್​​ಡೌನ್​​ ಎಫೆಕ್ಟ್ ನಿಂದ ಬಿಕೋ ಎನ್ನುತ್ತಿದ್ದ ವಾಣಿಜ್ಯ ‌ನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣ ಇದೀಗ ಮತ್ತೆ ಹೊಸ ರಂಗು ಪಡೆದುಕೊಳ್ಳುತ್ತಿದೆ.‌ ಪುನಃ ವಿಮಾನ ಹಾರಾಟ ಪ್ರಾರಂಭಗೊಂಡ ಪರಿಣಾಮ ಹುಬ್ಬಳ್ಳಿಯಲ್ಲಿ ವಿಮಾನ ಪ್ರಯಾಣ ಸಹಜ ಸ್ಥಿತಿಯತ್ತ ಮರಳಿದೆ.

ವಿಮಾನಯಾನದತ್ತ ಪ್ರಯಾಣಿಕರ ಒಲವು

ಕೊರೊನಾ ವೈರಸ್ ಭೀತಿ ಹಿನ್ನೆಲೆ ಲಾಕ್​ಡೌನ್ ಘೋಷಣೆಯಾದಾಗ ಬಂದ್ ಆಗಿದ್ದ ವಿಮಾನ ಪ್ರಯಾಣ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಮೆ.25 ರಿಂದ ಪ್ರಾರಂಭವಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಇಂಡಿಗೋ ಮತ್ತು ಸ್ಟಾರ್ ಏರ್ ವಿಮಾನ ಪ್ರಯಾಣ ಪ್ರಾರಂಭಗೊಂಡಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮತ್ತೆ ವಿಮಾನಯಾನ ಮೊದಲಿನ ಸ್ಥಿತಿಗೆ ಮರಳಿದೆ.

ಆಗಸ್ಟ್​ ಕೊನೆ ವಾರದಲ್ಲಿ ಏಳು ಹಾಗೂ ನಂತರದ ದಿನಗಳಲ್ಲಿ ಹತ್ತರಿಂದ ಹನ್ನೆರಡು ವಿಮಾನಗಳು ಕಾರ್ಯಾರಂಭ ಮಾಡಿದ್ದವು. ಪ್ರಯಾಣಿಕರಿಗಾಗಿ ಮುಂಜಾಗ್ರತಾ ಕ್ರಮವಾಗಿ ಸೋಶಿಯಲ್ ಡಿಸ್ಟೆನ್ಸ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಆಗಸ್ಟ್​ನಿಂದಲೇ​​ ವಿಮಾನ ಪ್ರಯಾಣಕ್ಕೆ ಜನ್ರು ಮೊರೆ ಹೋಗಿದ್ದು, 2,355 ಜನರು ವಿಮಾನದಲ್ಲಿ ಪ್ರಯಾಣಿಸಿದ್ರು. ವಿಮಾನ ಪ್ರಯಾಣ ಆರೋಗ್ಯಕರ ಹಾಗೂ ಆರಾಮದಾಯಕ ಎಂಬ ಭಾವನೆ ಜನರಲ್ಲಿ ವ್ಯಕ್ತವಾದ ಬೆನ್ನಲ್ಲೇ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣ ಚೇತರಿಕೆ ಕಂಡಿದ್ದು, ಮುಂದಿನ ದಿನಗಳಲ್ಲಿ ಜನರು ಹೆಚ್ಚಿನ ವಿಮಾನ ಸೇವೆ ಪಡೆಯಲಿದ್ದಾರೆ ಎಂಬ ವಿಶ್ವಾಸವನ್ನು ವಿಮಾನಯಾನ ಅಧಿಕಾರಿಗಳು ಹೊಂದಿದ್ದಾರೆ.

ಲಾಕ್​ಡೌನ್ ಪೂರ್ವದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಫೆಬ್ರವರಿ ತಿಂಗಳಲ್ಲಿ 673 ವಿಮಾನಗಳು ಪ್ರಯಾಣಿಸಿದ್ದು, 40870 ಪ್ರಯಾಣಿಕರು ಪ್ರಯಾಣಿಸಿದ್ದರು. ಅಲ್ಲದೇ ಮಾರ್ಚ್ ತಿಂಗಳಿನಲ್ಲಿ 501 ವಿಮಾನ ಸಂಚರಿಸಿ 23,979 ಪ್ರಯಾಣಿಕರು ಸಂಚರಿಸಿದ್ದರು. ಆದರೆ ಲಾಕ್​ಡೌನ್ ಘೋಷಣೆಯಿಂದ‌ ಏಪ್ರಿಲ್ ತಿಂಗಳಿನಲ್ಲಿ ಜೀರೊ ಪ್ರಮಾಣಕ್ಕೆ ಇಳಿದಿತ್ತು. ಅಲ್ಲದೇ ‌ಮೇ ತಿಂಗಳಲ್ಲಿ 04 ವಿಮಾನ ಸಂಚಾರ ನಡೆಸಿ 67 ಪ್ರಯಾಣಿಕರು ಸಂಚಾರ ಮಾಡಿದ್ದರು. ಜೂನ್ ತಿಂಗಳಲ್ಲಿ14 ವಿಮಾನ ಸಂಚಾರ ನಡೆಸಿ ಕೇವಲ 62 ಜನ ಪ್ರಯಾಣಿಸಿದ್ದರು. ಜುಲೈ ಹಾಗೂ ಆಗಸ್ಟ್​ ತಿಂಗಳಲ್ಲಿ ಚೇತರಿಕೆ ಕಂಡಿದ್ದು, ಜುಲೈನಲ್ಲಿ 40 ವಿಮಾನ ಸಂಚರಿಸಿ 930 ಜನ ಪ್ರಯಾಣಿಸಿದ್ದಾರೆ.

ABOUT THE AUTHOR

...view details