ಹುಬ್ಬಳ್ಳಿ:ಹುಬ್ಬಳ್ಳಿ-ಪುಣೆ ನಡುವೆ ಸ್ಥಗಿತಗೊಂಡಿದ್ದ ವಿಮಾನ ಸೇವೆ ಪುನಾರಂಭವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ಹಂಚಿಕೊಂಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು "ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿ - ಪುಣೆ - ಹುಬ್ಬಳ್ಳಿ ಮಾರ್ಗ ಸಂಚರಿಸುವ ವಿಮಾನಗಳು ಪುನಾರಂಭವಾಗಿವೆ. ಫೆಬ್ರವರಿ 2 ರಿಂದ ವಾರಕ್ಕೆ 4 ವಿಮಾನಗಳು ನಿರಂತರವಾಗಿ ಸಂಚರಿಸಲಿವೆ. ನಮ್ಮ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರಲು ಸಹಕರಿಸಿದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಮತ್ತು ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಇಂಡಿಗೋದ ಆಡಳಿತ ವರ್ಗದವರಿಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಹುಬ್ಬಳ್ಳಿ-ಪುಣೆ ನಡುವೆ ಸ್ಥಗಿತಗೊಂಡಿದ್ದ ವಿಮಾನ ಸೇವೆ ಪುನಾರಂಭ: ಸಚಿವ ಪ್ರಹ್ಲಾದ್ ಜೋಶಿ - ಸಚಿವ ಪ್ರಹ್ಲಾದ್ ಜೋಶಿ
"ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿ - ಪುಣೆ - ಹುಬ್ಬಳ್ಳಿ ಮಾರ್ಗ ಸಂಚರಿಸುವ ವಿಮಾನಗಳು ಪುನಾರಂಭವಾಗಿವೆ" ಎಂದು ಸಚಿವ ಪ್ರಹ್ಲಾದ್ ಜೋಶಿ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಸ್ಥಗಿತಗೊಂಡ ವಿಮಾನ ಸೇವೆ ಮತ್ತೆ ಆರಂಭ
Published : Jan 17, 2024, 11:43 AM IST