ಕರ್ನಾಟಕ

karnataka

ETV Bharat / state

ಧಾರವಾಡದಲ್ಲಿ ಇಂದು ಐದು ಪಾಸಿಟಿವ್.. 183 ಕ್ಕೇರಿದ ಸೋಂಕಿತರ ಸಂಖ್ಯೆ - Dharwad corona updates

ಇಂದು ಧಾರವಾಡದಲ್ಲಿ ಐವರಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 183ಕ್ಕೆ ಏರಿಕೆಯಾಗಿದೆ.

DC deepa cholan
DC deepa cholan

By

Published : Jun 20, 2020, 9:27 PM IST

ಧಾರವಾಡ :ಜಿಲ್ಲೆಯಲ್ಲಿ ಇಂದು ಐದು ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.
DWD 179- ಪಿ- 8286 (52 ವರ್ಷ,ಪುರುಷ) ಇವರು ನಗರದ ಸಂಗಮ್ ಟಾಕೀಸ್ ಹತ್ತಿರ ಕೆಂಪಗೇರಿ ಓಣಿಯ ನಿವಾಸಿಯಾಗಿದ್ದಾರೆ. ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು.

DWD 180 - ಪಿ- 8287 (65 ವರ್ಷ,ಮಹಿಳೆ ) ಇವರು ಹುಬ್ಬಳ್ಳಿ ತಾಲೂಕು ರಾಯನಾಳದ ಬಸಮ್ಮ ಕಾಲೋನಿಯ ನಿವಾಸಿಯಾಗಿದ್ದು, ಸಂಪರ್ಕ ಪತ್ತೆ ಮಾಡಲಾಗುತ್ತಿದೆ.

DWD - 181 ಪಿ- 8288 ( 43 ವರ್ಷ ,ಪುರುಷ) ಹುಬ್ಬಳ್ಳಿ ರಾಮಲಿಂಗೇಶ್ವರ ನಗರದ ನಿವಾಸಿಯಾಗಿದ್ದು‍, ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ( ಐಎಲ್ಐ) ಬಳಲುತ್ತಿದ್ದರು.

DWD 182-ಪಿ-8289 (48 ವರ್ಷ, ಪುರುಷ) ,DWD 183- ಪಿ-8290(40 ವರ್ಷ,ಮಹಿಳೆ) ಇವರಿಬ್ಬರೂ ನವಲಗುಂದ ತಾಲೂಕಿನ ಮೊರಬ ಗ್ರಾಮದ ನಿವಾಸಿಗಳಾಗಿದ್ದಾರೆ. ಪಿ-7039 ಅವರೊಂದಿಗೆ ಸಂಪರ್ಕ ಹೊಂದಿದ್ದರು.

ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 183 ಕ್ಕೇರಿದೆ. 62 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ABOUT THE AUTHOR

...view details