ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿಂದು 5 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಧಾರವಾಡದಲ್ಲಿ ಇಂದು ಐದು ಕೊರೊನಾ ಕೇಸ್ ಪತ್ತೆ: 31ಕ್ಕೆ ಏರಿದ ಸೋಂಕಿತರ ಸಂಖ್ಯೆ
ಧಾರವಾಡ ಜಿಲ್ಲೆಯಲ್ಲಿಂದು 5 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆ ಜಿಲ್ಲೆಯ ಜನರಲ್ಲಿ ಆತಂಕ ಮೂಡಿದೆ.
ಜಿಲ್ಲೆಯಲ್ಲಿ ಐದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ
ಪಿ-1505(ತೆಲಂಗಾಣ ಪ್ರಯಾಣ 06 ವರ್ಷದ ಬಾಲಕಿ), ಪಿ-1506(ತೆಲಂಗಾಣ ಪ್ರಯಾಣ 29 ವರ್ಷದ ಮಹಿಳೆ), ಪಿ-1507(ಮುಂಬೈ ಮಹಾರಾಷ್ಟ್ರ ಪ್ರಯಾಣ 09 ವರ್ಷದ ಬಾಲಕಿ), ಪಿ-1508(ಮುಂಬೈ ಪ್ರವಾಸ 24 ವರ್ಷದ ಮಹಿಳೆ), ಪಿ-1509(ಮುಂಬೈ ಪ್ರವಾಸ 35 ವರ್ಷದ ಪುರುಷ) ಸೋಂಕು ದೃಢಪಟ್ಟಿದೆ.
ಈಗಾಗಲೇ 9 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸೊಂಕೀತರ ಸಂಖ್ಯೆ 31ಕ್ಕೆ ಏರಿದೆ. ಅಲ್ಲದೆ ಉಳಿದವರು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.